ಗೋಧಿ ಬಣ್ಣ ಅತ್ಯುತ್ತಮ್ಮ ಮೈಕಟ್ಟು

Posted by Pramod 04/06/2016 7 Comment(s)


Director: Hemanth. M. Rao

Cast: Anant Nag, Rakshit Shetty, Sruthi Hariharan, Achyuth Kumar, Vashishta N. Simha

Running Length : 2hr 24mins

 

Note : Though Iruve is the Official Merchandiser for the Movie #GBSM, The following is an Unbiased Opinion from the author.
 

 

ಹೊಸ ವಿಷಯವನ್ನು ಹೇಳಲು ಹೊರಟ ಯಾವುದೋ ಸಿನಿಮಾ ತಂಡ, Advertisinggaagi ಆಯ್ಕೆಮಾಡಿಕೊಂಡ ವಿಧಾನಗಳು ವಿಭಿನ್ನವಾಗಿದ್ದವು. ಕಾಫೀಕಪ್ , T-Shirt, ಆಗಿರಬಹುದು ಅಥವಾ ಸಿನೆಮಾದ character introduction video ಮುಖೇನ ಕಥೆ ಹೇಳ ಹೊರಟಿದ್ದು. ಅದು ಬೇರೆ ಯಾರು ಅಲ್ಲದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ತಂಡದ್ದು.

ದೂರದರ್ಶನದಲ್ಲಿ ವಾರ್ತೆಗಳು ಪ್ರಸರವಾಗುವ ಮುನ್ನ ಬರುತ್ತಿದ್ದ 'ಕಾಣೆಯಾದವರ ಬಗೆಗಿನ ಪ್ರಕಟಣೆ' ಎಂಬ ಸೂಚಿಯನ್ನಾಧರಿಸಿ ನಿರ್ದೇಶಕ ಹೇಮಂತ್ ಸ್ಪೂರ್ತಿಗೊಂಡು ಈ ಸಿನಿಮಾ ಮಾಡಿದ್ದಾರೆ.ಒಂದು ಸಣ್ಣ ಎಳೆ ಯನ್ನು, ದೊಡ್ಡ Feature ಸಿನಿಮಾ ಆಗಲು ಪ್ರೇರೇಪಿಸಿದೆ . ಈ Thought processige ಒಂದು ಜೈ. ವಿಭಿನ್ನ ಪ್ರಯೋಗಗಳ ಮೂಲಕ ಮೊದಲ ಸಿನಿಮಾದಲ್ಲೇ ತಮ್ಮ ಗರಿಮೆಯನ್ನು ತೋರಿಸುತ್ತಿರುವ ಹೊಸ ಅಲೆಯ ನಿರ್ದೇಶಕರಾದ ರಾಮ್ ರೆಡ್ಡಿ , ಅನುಪ್ ಭಂಡಾರಿ ಸಾಲಿನಲ್ಲಿ ಹೇಮಂತ್ ರಾವ್ ಹೊಸ ಸೇರ್ಪಡೆ . ಇವರು ಕಥೆ, ನಿರೂಪಣೆ , Characterisations  ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಎಲ್ಲ ವಿಭಾಗಗಳಲ್ಲಿಯೂ ನಗಾರಿ ಬಾರಿಸಿದ್ದಾರೆ.


Review ಮುಂದೆ ಹೇಳೋಕ್ ಮುಂಚೆ ಈ ಸಿನಿಮಾದ ಮುಖ್ಯ ಅಂಶವಾಗಿರುವ ವೆಂಕೊಬ್ ರಾವ್ ಅವರ ಮಾನಸಿಕ ಪರಿಸ್ಥಿತಿಯ ( ಖಾಯಿಲೆ ಅನ್ನೋ ಪದ ಪ್ರಯೋಗ ತಪ್ಪಾದೀತು) ಬಗ್ಗೆ ಹೇಳಲೇಬೇಕು.

 

Alzheimers Dementia:
 

ದಿಮೆನ್ಶಿಯಾ ಒಬ್ಬ ಮನುಷ್ಯನನ್ನು ಮರೆವಿನ ರೂಪದಲ್ಲಿ ಹಂತಹಂತವಾಗಿ  ಕಾಡಿ ,ಜೀವನಾವಧಿಯನ್ನು ಕ್ಷೀಣಿಸುತ್ತದೆ . ಈ ಖಾಯಿಲೆಗೆ ಒಳಗಾದವರು ಮೊದಮೊದಲು ಹೆಸರು , ಫೋನ್ ನಂಬರ್ ಗಳನ್ನು ಮರೆಯುತ್ತಾರೆ. ನಂತರ ಜೊತೆಗಿರುವವರನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ . ಯಾವುದೇ ಕೆಲಸ ಶುರು ಮಾಡಿ, ಅರ್ಧ ಮುಗಿಸುವ ಹೊತ್ತಿಗೆ ತಾವು ಏನು ಮಾಡುತ್ತಿದ್ದರೆಂಬ  ಅರಿವಿಗೆ ಬಾರದೆ ಚಡಪಡಿಸುತ್ತಾರೆ. ಮನೆ ಅಡ್ರೆಸ್ ಸಹಿತ ಜ್ಞಾಪಕ ಇರುವುದಿಲ್ಲ, ಎಲ್ಲಿಯೋ ಹೊರಟು ನಿಂತು ತಮ್ಮ Destination  ಮರೆತಂತಾಗಿ ದಾರಿ ತಪ್ಪಿ ಬೇರೆಡೆಗೆ ಹೋಗಿಬಿಡುತ್ತಾರೆ. ಜೊತೆಗಿರುವವರನ್ನು ಗುರುತಿಸಲು ಸಾಧ್ಯ ವಾಗದೆ ಮನಸ್ಸಿನಲ್ಲಿ ತೊಳಲಾಡಿ ಕೋಪ ಗೊಳ್ಳುತ್ತಾರೆ. ಹೊಡೆಯಲು ಮುಂದಾಗುತ್ತಾರೆ. ಅದನ್ನು ಮೀರಿ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಮಗುವಾಗಿಬಿಡುತ್ತಾರೆ.

ಯಾವುದೋ ಅಚ್ಚಳಿಯದೆ ಉಳಿದ ನೆನಪುಗಳು ಸದಾ ಅವರನ್ನು ಕಾಡುತ್ತಿರುತ್ತವೆ . ಅವುಗಳನ್ನೇ ಪದೇ ಪದೇ ಜಪಿಸುತ್ತಾರೆ. ಸ್ನಾನ ಮಾಡುವುದು, ಊಟ ಮಾಡುವುದು ಕೂಡ ಮರೆತು ಹೋಗಿ, ನಿತ್ಯಕರ್ಮಾನುಷ್ಟಾನಗಳಿಗೆ ಬೇರೆಯವರ ಸಹಾಯ ಬೇಕಾಗುತ್ತದೆ. ಮನೆಯವರ ಸಹಾಯ ಸಹಕಾರದಿಂದ ಮಾತ್ರ ಇವರ ಜೀವನ ಅರ್ಥ ಕಂಡುಕೊಳ್ಳಬೇಕಾದ ಪರಿಸ್ಥಿತಿ . ಈ ನಗರದ  Hectic  ಜೀವನದಲ್ಲಿ ಮನೆಯವರು ಕೂಡ at one point of time ಕೈಮೀರಿ ರೋಸಿಹೋದಾಗ ಹೋದಾಗ ಈ Patientna ನೋಡಿಕೊಳ್ಳುವ ಸಲುವಾಗಿ  ವೃದ್ಧಾಶ್ರಮ , ಅಬಲಾಶ್ರಮಗಳ ಮೊರೆ ಹೋಗುತ್ತಾರೆ.

 

Missing ಅನಂತ್...

Venkob rao , 66 ವರುಷದ  retired ಮನುಷ್ಯ  ಈ  ಆಲ್ಜೀಮರ್ ಖಾಯಿಲೆಯಿಂದ ಬಳಲುತ್ತಿರುತ್ತಾರೆ.

ಅವರ ಒಬ್ಬನೇ ಮಗ ಶಿವ. ಹೆಂಡತಿ ಪುಷ್ಪಾ ೭ ವರ್ಷಗಳ ಮುಂಚೆಯೇ cancerನಿಂದ  ತೀರಿಕೊಂಡಿದ್ದರೂ ಇವತ್ತಿಗೂ ಅವಳದೇ ನೆನಪು .. ಬದುಕಿದ್ದಾಳೆ ಎಂಬ ಭ್ರಾಂತು . ಧಿಡೀರನೆ ಒಂದು ದಿನ  old age homeನಿಂದ ತಪ್ಪಿಸಿಕೊಳ್ಳುವ  venkob rao , ಸುಪಾರಿ ಹಂತಕನೋರ್ವನ  ಕೈಲಿ ಸಿಕ್ಕಿಕೊಳ್ಳುತ್ತಾರೆ .ಮುಂದೆ ಏನಾಯಿತೆಂದು ಚಿತ್ರಮಂದಿರದಲ್ಲಿ ನೋಡಿರಿ.

Carrom ಆಡುವಾಗ ಮೋಸಕ್ಕೆ ಒಳಗಾಗಿ ಅವಾಕ್ಕಾಗುವ  scenu, pencil ಕದ್ದು ಸಿಕ್ಕಿಕೊಂಡಾಗ ಬೀರುವ ಆ ನಿಷ್ಕಲ್ಮಶ ನಗುವಿನ ನಗು , Cricket commentary scene, ಒಬ್ಬರೇ ಇದ್ದರು ಯಾರ ಜೊತೆಗೋ ಮಾತಡುತ್ತಿರುವಂತೆ ಭ್ರಮಿಸುವ scenalli ಅಮೋಘವಾಗಿ ಅಭಿನಯಿಸಿ ನಮ್ಮನು ಸಹ  story ಜೊತೆ ಸೆಳೆದುಕೊಂಡು ಹೋಗುತ್ತಾರೆ .

ಅನಂತ್ ನಾಗ್ ಸರ್ ಅವರ ಆಕ್ಟಿಂಗ್ ಅವರ career best ಆಗಿದ್ದು , ನೋಡುಗರನ್ನ ನಗಿಸಿ, ಅಳಿಸುತ್ತದೆ  ..ಪ್ರಾಯಶಃ ಇವರು ಬಿಟ್ಟರೆ ಬೇರೆ ಯಾರು ಈ ಪಾತ್ರಕ್ಕೆ ನ್ಯಾಯ ಒದಗಿಸುತ್ತಿರಲಿಲ್ಲ. ಇವರ ಮನೋಜ್ಞ ಅಭಿನಯ ಸಿನಿ ರಂಜಕರನ್ನು ಮೂಕವಿಸ್ಮಿತರನ್ನಾಗಿಸುತ್ತವೆ .ಇವರ ಈ ಪಾತ್ರದ ಅಭಿನಯಕ್ಕೆ ಪ್ರಶಸ್ತಿಗಳು ಲಭಿಸಿದಲ್ಲಿ ,ಸಂದೇಹವೇ ಬೇಡ .

 

Music and BGM
 

 

ಹೊಸ ಅಲೆ ಎಬ್ಬಿಸಿರುವ ಚರಣರಾಜ್ ಅವರ ಸಂಗೀತ ಎಲ್ಲ ಮ್ಯೂಸಿಕ್ಪ್ರಕಾರಗಳ ಕದ ತಟ್ಟಿದೆ. Jazz ,Electronic, Urban, Blues ಮತ್ತೆ Contemporary .. ಹೀಗೆ ಎಲ್ಲ ಮಜಲುಗಳಲ್ಲಿನ ಸಂಗೀತ ಕೇಳಸಿಗುತ್ತದೆ. ಚರಣ್ ರಾಜ್ ಅವರ ಮಾಂತ್ರಿಕ ಮ್ಯೂಸಿಕ್ Catchy ಯಾಗಿದ್ದು  ಅವರ ಹಾಡನ್ನು Loop ಆಗಿಸಿ headphone ಹಾಕಿಕೊಂಡು , Loop ಕಿತ್ತುಹೋಗೋ ವರೆಗೂ ಹಾಡು ಕೇಳಬೇಕೆನ್ನಿಸುತ್ತದೆ. ಅಷ್ಟರ ಮಟ್ಟಿಗೆ ಅವರ Situational ಹಾಡುಗಳು ನಮ್ಮನು ಮೋಡಿ ಮಾಡುತ್ತದೆ. Background ಸ್ಕೋರ್ ಸಿನೆಮಾಗೆ ಪೂರಕವಾಗಿದೆ .

 

Rakshith Shetty

ಶಿವ ಎನ್ನುವ Software Techie Character ಅನ್ನು ಇಲ್ಲಿ ನಿರ್ವಹಿಸಿದ್ದಾರೆ. Techie rolenalli ಇವರದ್ದು  ಮೊದಲ ಪ್ರಯತ್ನ ಹಾಗೂ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಕೆಲಸದ ನಿಮಿತ್ತ Mumbaige ಹೋಗಬೇಕಾದಾಗ, ತನ್ನ ತಂದೆಯನ್ನ ವೃದ್ಧಾಶ್ರಮಕ್ಕೆ ಸೇರಿಸಿ ತನ್ನ ಜವಾಬ್ದಾರಿಯಿಂದ ಜಾರಿಕೊಳ್ತಾನೆ. ಚಿಕ್ಕಂದಿನಿಂದಲೂ ತನ್ನ ತಂದೆಯೊಂದಿಗೆ ಮನಬಿಚ್ಚಿ ಮಾತನಾಡದ ಶಿವ,ತನ್ನ ತಂದೆ ಖುಷಿಯಾಗಿದ್ದಾರ ಇಲ್ವಾ ಎಂಬ ಬಗ್ಗೆ ಯೋಚನೆ ಮಾಡುವ ಪ್ರಯತ್ನವನ್ನೇ ಮಾಡಿರೋದಿಲ್ಲ. . ಟ್ರೇಲರ್, ಪೋಸ್ಟರ್ಗಳಲ್ಲಿ ನೋಡಿರೋ ಹಾಗೆ ಇಲ್ಲೊಂದು ಅಪೂರ್ಣವಾದ puzzle  ಒಂದು ಕಾಣಸಿಗುತ್ತದೆ. ಅದು ವ್ಯತಿರಿಕ್ತವಾಗಿ ತನ್ನತಂದೆಯನ್ನು ದೂರವಿಟ್ಟು ಕಳೆದುಕೊಂಡ rakshith shettiya ತಳಮಳಗೊಳಗಾದ ಮನಾಸ್ಸನ್ನು ಅಚ್ಚುಕಟ್ಟಾಗಿ ಬಿಂಬಿsuttade.

ಕಾಣೆಯಾದ ತಂದೆಯನ್ನ ಹುಡುಕುತ್ತಾ ಸಾಗುವ ಪ್ರಯಾಣದಲ್ಲಿ, Laughing club scenu, ಚಿಕ್ಕಂದಿನಲ್ಲಿ ಗೋಡೆ ಮೇಲೆ ಗೀಚಿದ sceneu, ಶಾಲೇಲಿ sanchari vijay ಅವರ ಪೇಂಟಿಂಗ್ ಮನವರಿಕೆ .. ಇವೆಲ್ಲ ಶಿವನಲ್ಲಿ ತಾನು ಏನೆಲ್ಲಾ ಕಳೆದುಕೊಂಡೆ ಎಂಬುವುದನ್ನು ಮನವರಿಕೆ ಮಾಡಿಕೊಡುತ್ತಾ ಹೋಗುತ್ತೆ . ಮನವರಿಕೆಯಾಗ್ತಾ ಹೋದಂತೆಲ್ಲಾ , ಶಿವನ ಮನದಲ್ಲಿ ಕಳೆದುಹೋದ ತನ್ನ ತಂದೆಯನ್ನ ಮತ್ತೆ  ನೋಡಲೇಬೇಕೆಂಬ ತುಡಿತ ಹೆಚ್ಚಾಗುತ್ತೆ. ಮುಂದೇನಾಗುತ್ತೆ ?? ಈ ಹುಡುಕಾಟದಲ್ಲಿ ತನ್ನ ತಂದೆ ಸಿಗುತ್ತಾರ ?? ಉತ್ತರ – ಚಿತ್ರಮಂದಿರದಲ್ಲಿ ...... :P

 

Shruthi Hariharan

ವೃದ್ದಾಶ್ರಮದಲ್ಲಿ ವೆಂಕೋಬರಾವ್ ಅವರಿಗೆ ಚಿಕಿತ್ಸೆ ನೀಡೊದರ ಜೊತೆಗೆ ಅವರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳೋ ಡಾ.ಸಹನಾ alias ಶ್ರುತಿ ಹರಿಹರನ್ ಇಲ್ಲಿ ಬರೀ  ಡಾಕ್ಟರ್ ಆಗಿರದೆ, ವ್ಯಕ್ತಿಗತವಾಗಿ ಮನೆ ಮಗಳು ಅನ್ನಿಸುತ್ತಾರೆ. ಕಳೆದುಹೋದ Patient ಅನ್ನು ಹುಡುಕಲು ಶಿವನೊಂದಿಗೆ ಹೊರಡುತ್ತಾಳೆ ಸಹನಾ. ತನ್ನ ಹೆತ್ತ ತಂದೆಯ ಬಗ್ಗೆ ಏನೊಂದು ತಿಳಿಯದ ಶಿವನಿಗೆ, ವೆಂಕೋಬ ರಾವ್ ಅವರ ಬದುಕಿನ ಕಥೆಯನ್ನ ಎಳೆ ಎಳೆಯಾಗಿ ಹೇಳುತ್ತಾ ಹೋಗುತ್ತಾಳೆ.

 ಇವರ ಪಾತ್ರ ಪೋಷಣೆ ಚೆನ್ನಾಗಿ ಮೂಡಿಬಂದಿದ್ದು, ಡಾಕ್ಟರ್ ಸಹನಾ ಅನ್ನೋ ಕ್ಯಾರಕ್ಟರ್ ಬಗೆಗಿನ  'ಕೋಮಲ ಕೋಮಲ ಹೆಣ್ಣೆ' ಹಾಡು ಕನ್ನಡಿಯಾಗುತ್ತದೆ . ಪಾತ್ರದ Intensity ಅರ್ಥ ಮಾಡಿಕೊಂಡು ಅದ್ಭುತವಾಗಿ ನಿರ್ವಹಿಸಿ ಸಾಫಲ್ಯ ಪಡೆದಿದ್ದಾರೆ. A Promising Actress.

Vasishta Simha

ನ್ನೂ ವಸಿಷ್ಟ ಸಿಂಹ ಅವರು ರಂಗ ಎನ್ನುವ supari killer ಪಾತ್ರ ನಿರ್ವಹಿಸಿದ್ದು ನ್ಯಾಯ ಒದಗಿಸಿದ್ದಾರೆ.

ರಂಗಭೂಮಿ  background ನಿಂದ ಬಂದ ಇವರು ಈ ಮುಂಚೆ ರಾಜಾಹುಲಿ , ಉಗ್ರಂ ಸಿನಿಮಾದಲ್ಲಿ ನಟಿಸಿರುತ್ತಾರೆ . ‘ಗಾಸಿ ಗುಮ್ಮ ಬಂದ ‘ ಹಾಡು ಇವರ characterige ಇಂಬು ನೀಡುತ್ತದೆ.

ನಮ್ಮ ಮನಸ್ಸಿನಲ್ಲಿ ಕಪ್ಪು ನಾಯಿ , ಬಿಳಿ ನಾಯಿ ಯಾವಾಗಲು ಜಗಳವಾಡುತ್ತಿರುತ್ತವೆ . ಬಿಳಿ ನಾಯಿ ಪ್ರೀತಿ, ನಿಸ್ವಾರ್ಥ , ತ್ಯಾಗದ ಸಂಕೇತ .ಕಪ್ಪು ನಾಯಿ ದ್ವೇಷ ,ಅಸೂಯೆ ,ಕೋಪದ ಸಂಕೇತ. ಇದರಲ್ಲಿ ಯಾವ ನಾಯಿ ಜಯಗೊಳಿಸುತ್ತೆ ಅಂದರೆ , ನಾವು ಯಾವುದಕ್ಕೆ ಹೆಚ್ಚು Biscuit ಹಾಕುತ್ತೇವೆಯೋ ಅದುವೇ .

ಈ ಸಣ್ಣ ವೆಂಕೊಬರ  story ಒಬ್ಬ serial killer ರಂಗನ ಮೇಲೆ ಪರಿಣಾಮ ಬೀರುವುದು ಗಮನಾರ್ಹ .

ಉಳಿದಂತೆ ಅಚ್ಯುತ್ ಕುಮಾರ್ as usual ಆ versatile & Flawless. ಒಂದೆರಡು scenealli ಎಲ್ಲೋ ಅವರಿಗೆ ಹೆಚ್ಚಿಗೆ ಡೈಲಾಗ್ಸ್ ಕೊಟ್ಟು ಸ್ವಲ್ಪ ಓವರ್-ಆಕ್ಟಿಂಗ್ ಮಾಡಿಸಿದ್ದಾರೆ ಅಂಥ ಕೆಲವರಿಗೆ  ಅನ್ನಿಸಬಹುದು. ದತ್ತಣ್ಣ ಹಾಗೂ ರಂಗನ assistant ಪಾತ್ರಧಾರಿ ‘ಮಂಜ’ ಮುಖ್ಯವಾಗಿ ಕಾಣಸಿಗುತ್ತಾರೆ.

ಕೆಲವೊಂದು  dialogues ಮನಸ್ಸಿನಲ್ಲಿ ನಾಟುತ್ತೆ :

  • ಕಲ್ಪನೆ, ನಿಮ್ಮ ಹಾಳೆಯಷ್ಟೇ ಚಿಕ್ಕದಗಿರಬೇಕಂಥ ಏನು ಇಲ್ಲ .
  • Cigarette ಅಂಗಡಿಯವರ policy ಏನಂದ್ರೆ : ಅಪ್ಪ ಸೇದೊದನ್ನ ಮಗನಿಗೆ ಹೇಳಬಾರದು . ಮಗಂದು ಅಪ್ಪನಿಗೆ ಹೇಳಬಾರದು .
  • ಪೆನ್ನಲ್ಲಿ ಬರಿಯೋ ಅಭ್ಯಾಸಾನೆ ಹೋಗ್ಬಿಟ್ಟಿದೆ . ಇನ್ನು Pencillu, Colour pencil ಎಲ್ಲಿಂದ ಬರಬೇಕು .

 

ಈ Cinema ಒಂದು  typical Middle class family ಸುತ್ತಾ ಹೆಣೆದಿದ್ದು ನಮ್ಮ ಬೆಂಗಳೂರಿನ ಬಸವನಗುಡಿ, ಗಾಂಧಿ ಬಜಾರು ,  v v  Puram ಸುತ್ತಾ ಚಿತ್ರೀಕರಿಸಿರುತ್ತಾರೆ , Local flavoursನ  ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ Art Departmentinavaru. Costume design simple ಆಗಿದ್ದು Appropriate ಆಗಿದೆ .

 

ಇಂದಿನ ದಿನದ ತಂದೆ-ಮಗನ ಸಂಬಂಧಗಳು ಬಿರುಕುಬಿಟ್ಟಿರುವ ತೀವ್ರತೆಯನ್ನು ನಿರ್ದೇಶಕರು ಅರ್ಥಮಾಡಿಕೊಂಡಿದ್ದಾರೆ, ಅದರಂತೆ, ಅವರ ಸಿನಿಮಾ, ದೃಷ್ಟಾಂತವನ್ನು ದೃಶ್ಯ-ರೂಪಕವಾಗಿಸಿದ್ದಾರೆ. ಕಳೆದುಹೋದವರ ಹುಡುಕಾಟದ ನಡುವೆ , ನಿಮ್ಮ ನೆನಪಿನ ಮಜಲುಗಳನ್ನು ತೆರೆದಿಡುತ್ತಾರೆ . ಸಿನಿಮಾ ನೋಡ್ತಾ ನೋಡ್ತಾ ನಿಮಗೂ ನಿಮ್ಮ ತಂದೆಯ ನೆನಪಾಗಿ ಕಣ್ಣಾಲಿಗಳು ತೆವವಾದಲ್ಲಿ , ಅದು ನಿರ್ದೇಶಕನ ಸಾರ್ಥಕತೆ .

 

ಕೆಟ್ಟ ಪದಗಳನ್ನು Mute ಮಾಡಬಹುದಾಗಿತ್ತು . ಹಾಗು First Halfinalli Camera shots ಒಂದೆರಡು ಕಡೆ abrupt ಆಗಿ  end ಆಗಿದೆ . ಅದು Editorial purposega ಅಂತ ಗೊತ್ತಾಗಿಲ್ಲ . ಮೊದಲಾರ್ಧದಲ್ಲಿ ಸ್ವಲ್ಪ ಮಂದಗತಿ . By the way cinema releasigu ಮುನ್ನ highlight ಆದ  song ‘ ಅಲೆ ಮೂಡದೆ ನಿಂತಿದೆ ಸಾಗರ ’ ಹಾಡನ್ನೇ ಕತ್ತರಿಸಿದ್ದಾರೆ .. L

ಇವೆಲ್ಲವನ್ನೂ ಮೀರಿದ ಪ್ರಬುದ್ಧ ನಟನೆ ಹಾಗೂ  Strong storyline, ಸಣ್ಣ ಪುಟ್ಟ ತಪ್ಪನ್ನು ಮುಚ್ಚಿ ಹಾಕುತ್ತವೆ . ಪ್ರೇಕ್ಷಕ ಮಹಾಪ್ರಭುವಿಗೆ ರಸದೌತಣ ನೀಡುವುದರಲ್ಲಿ ಸಂದೇಹವೇ ಬೇಡ . Gold Class nalli ೫೦೦ ರೂಪಾಯಿ ಕೊಟ್ಟು ನೋಡಿದರೂ  ಸಹ ಈ ಸಿನಿಮಾ ನಿಮಗೆ ಮೋಸ ಮಾಡುವುದಿಲ್ಲ .

 

 

Verdict : A must watch movie for Matured Audience. Worth watch more than Once

Rating: 4.0/5.0

 Click Here to watch Charan Raj's Candid interview by iruve.in

Click here to by Official Merchandise of GBSM
 

-Pra.Sa.Ra

Tags: Review

7 Comment(s)

Deepak:
04/06/2016, 04:29:44 PM
Reply

Nice reviews, me yet to watch. Pretty good reviews over all.

pramod:
05/06/2016, 06:42:03 PM

Yes.. Do watch it over nearest Theatres. Not to miss!!

Aishwarya.P:
04/06/2016, 04:38:50 PM
Reply

Nice reviews!!will watch it soon

pramod:
05/06/2016, 06:42:49 PM

Please watch it before they take it off from theatres!!! :P

Hari:
04/06/2016, 05:09:04 PM
Reply

Excellent review mate. All aspects looks like yet another blockbuster movie. Will definitely watch in theatre soon :-) Cheers!

pramod:
05/06/2016, 06:43:04 PM

Dhanyavadagalu :)

Sunil Kumar:
04/06/2016, 05:54:37 PM
Reply

Very well written Pramod, indeed very much in detailed review.

pramod:
05/06/2016, 06:43:18 PM

Dhanyavadagalu :)

Srikanth:
04/06/2016, 10:31:27 PM
Reply

Awesome review brother.Innond sali film noodida anubhava aitu.Surely golden days bandide-kannada industry ge...

pramod:
05/06/2016, 06:44:34 PM

Howdu.. chandanavanada parva kaala antha helidre thappagalaradu... Naavu yaargu enu kadime illa antha Ede thatti nillo kaala nammadaagide :)

uday:
04/06/2016, 11:41:43 PM, ...
Reply

comment nodi impresss aadey, will definitely watch it..!

pramod:
05/06/2016, 06:50:33 PM

Neevu cinema nodibanni.. Nantara Nammannu hagu chitramaadidavarige Improvisations/Feedback kottide aadalli, Innu hechhu-hechhu olle prayatna maadalu saadhyavaguttade. Saadhyavadalli , Ishtavaadalli namma Tshirt kondukolluva mukhaantara olley cinemavannu Bembalisi :)Dhanyavadagalondige

pramod:
05/06/2016, 06:51:38 PM

E cinemada T-shirt illi labhyavide: http://iruve.in/gbsm?product_id=118

ABHISHEK S A:
06/06/2016, 09:53:37 PM
Reply

Very good review pramod. Should watch it soon.

Leave a Comment