ರಾಮ ರಾಮ ರೇ review

Posted by Pramod 22/10/2016 4 Comment(s)

 

Cult, Class, Classic – #RamaRamaRe  kannada movie review

 

 

CasT:Dharmanna Kadur, Nataraj Bhat, Keshava Jayaram, Sridhar Gowda, Bimbasree Ninasam, MK Mutt, Radha Ramachandra

DIRECTION:D Sathya Prakash

GENRE:Drama

DURATION:1 hour 52 minutes

 

ಒಂದೆಳೆ ಸ್ಟೋರಿ: ನೇಣುಕುಣಿಕೆಗೆ ಏರಬೇಕಿದ್ದ ಸ್ಯಾಂಡಲ್ ರಾಜ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ. ಹತ್ತು ಲಕ್ಷ ರುಪಾಯಿ ತಲೆದಂಡ ಹೊಂದಿದಾತ ತನ್ನ ಜರ್ನಿಯಲ್ಲಿ ಅಚಾನಕ್ಕಾಗಿ ನಿವೃತ್ತ ಗಲ್ಲು ನಿರ್ವಾಹಕ ರಾಮಣ್ಣ  , ಮನೆಯಿಂದ ಓಡಿಬಂದ ಪ್ರೇಮಿಗಳಿಬ್ಬರು ಹಾಗೂ ಬಸರೀ ಹೆಂಗಸೊಬ್ಬಳನ್ನು ಭೇಟಿಯಾಗುತ್ತಾನೆ. ಈ ಖೈದಿ ಸಿಕ್ಕಿಬೀಳ್ತಾನಾ? ತಂದೆ-ತಾಯಿಯಿಂದ ದೂರಾದ ಆ ಪ್ರೇಮಿಗಳು ಒಂದಾಗುತ್ತಾರಾ? ಗುರಿ ಹೊಂದಿರುವ ಇವರ ಮುಖೇನ ನಮ್ಮ ಖೈದಿ ಎನ್ನನ್ನು ಅರಿತುಕೊಳ್ಳುತ್ತಾನೆ? ಅನ್ನೋ ಕುತೂಹಲವನ್ನು ಇಂಗಿಸಲು ದೊಡ್ಡ ಪರದೆಯ ಮೇಲೆ ಈ ಚಿತ್ರವನ್ನು ನೋಡಿ...

 

ಈ ಸಿನಿಮಾದಲ್ಲಿ ‘ಕೇಳು ಕೃಷ್ಣ.. ಹೇಳು ಪಾರ್ಥ ಅನ್ನೋ ಹಾಡೊಂದಿದೆ. ಈ ಹಾಡಿನ ತಿರುಳೇ ಇಡೀ ಸಿನಿಮಾ..ಜೀವನದ ತಲ್ಲಣಗಳು , ಒಳ್ಳೆಯದು-ಕೆಟ್ಟದ್ದು , ಆಸೆ-ಅತಿಯಾಸೆ , ದುಡ್ಡು – ಸಂಬಂಧಗಳು ಹೀಗೆ ವ್ಯಕ್ತಿಗತವಾಗಿ ಜೀರ್ಣಿಸಿಕೊಳ್ಳಬಲ್ಲ ಭಾವನೆಗಳ ಸುಂದರವಾದ collage ಈ #RamaRamaRe. ಮನುಷ್ಯನ ಭಾವನೆಗಳು ಇಲ್ಲಿ ಪಾತ್ರಗಳಾಗಿವೆ. ಮುದುಕನಲ್ಲಿ ಮೌನ, ಅಸಹಾಯಕತೆ ಕಂಡರೆ , ಪ್ರೇಮಿಗಳಲ್ಲಿ ಜೀವನೋತ್ಸಾಹ, ಕನಸು ಹಾಗೂ ಈರ್ಷ್ಯೆ ಕಾಣುತ್ತೇವೆ. ಹಾಗೆಯೇ ಖೈದಿಯು ದುಗುಡ , ಆತಂಕಗಳ ಸಂಕೇತವಾದರೆ. ಬಸರೀ ಹೆಣ್ಣು ಮಗಳು ಮತ್ತವಳ ಅತ್ತೆ ನೋವು – ನಲಿವನ್ನು ಉಣಬಡಿಸುತ್ತಾರೆ.

 

ಹೋ... ಒಂದೇ ಬಾನಿನ ಕೆಳಗೆ ನೂರಾ ಎಂಟು ಮಂದಿಯು..
ಒಂದೇ ನೋವಿನ ಒಳಗೆ ಎಲ್ಲಾ ಇಲ್ಲಿ ಬಂಧಿಯೂ..

ನೋವು ನಲಿವು ಒಂದೇ ಥರವು ಎಲ್ಲಿಗೇ ಅಳೆದರೂ..

ನಮ್ಮ ಕಾಯೋ ದೇವನೇ.. ಏನೋ ನಿನ್ನ ಯೋಚನೆ...

ಅನನ್ಯ ಭಟ್ ಹಾಡಿರುವ ಈ ಅರ್ಥಮಯ ಸಾಲುಗಳು ತೆರೆಯ ಮೇಲೆ ಮೂಡುವಾಗ ಪ್ರೇಕ್ಷಕ ಮಂತ್ರಮುಗ್ಧನಾಗಿರುತ್ತಾನೆ.

 

ಸಿನಿಮಾದಲ್ಲಿ ದೊಡ್ಡ ನಟರಿಲ್ಲ ಆನೋ ಕೊರತೆಯನ್ನು ನೆನಪಿಗೆ ಬಾರದಂತೆ ಅಳಿಸಿ ಹಾಕಿದ್ದು ನಟರಾಜ್, ಧರ್ಮಣ್ಣ ಹಾಗೂ ಜಯರಾಂ ಅನ್ನೋ ರಂಗಭೂಮಿ ಕಲಾವಿದರ ಕೈಚಳಕ . ಬಿಂಬಶ್ರೀ ನೀನಾಸಂ ಹಾಗೂ ರಾಧಾ ರಾಮಚಂದ್ರ ಅವರ ಪಾತ್ರದಿಂದ ಹತ್ತಿರವಾಗುತ್ತಾರೆ.

ಇದೊಂದು road ಮೂವಿ ಆಗಿದ್ದು ಶೇಖಡಾ ೮೦ ರಷ್ಟು ರಸ್ತೆಯಲ್ಲೇ ನಡೆಯುವ ಸನ್ನಿವೇಶಗಳನ್ನು ಸೆರೆಹಿಡಿಯುವಲ್ಲಿ ಛಾಯಾಗ್ರಾಹಕ ‘ಲವಿತ್’ ಸಿನೆಮಾದ ಕಣ್ಣಾಗಿದ್ದಾರೆ.  ಕರ್ನಾಟಕ-ಮಹಾರಾಷ್ಟ್ರ ಬಾರ್ಡರ್ನಲ್ಲಿನ ಬಟಾಬಯಲಿನ ರಸ್ತೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತಾ ಬಣ್ಣಗಳಿಂದ ತುಂಬಿ ನೀಡಿದಂತ ಇವರ ಕ್ಯಾಮೆರಾ ಆಯಾಮಗಳ ಕೊಡುಗೆ ಅಪಾರ. ನೀವು ಈ ಮುಂಚೆ ನೋಡಿರದ ಜಾಗಗಳು , ಗುಡ್ಡು-ಗಾಡು , ಬಯಲುಸೀಮೆ ಜಾಗಗಳನ್ನು ಇಲ್ಲಿ ಸೆರೆಹಿಡಿದಿದ್ದಾರೆ.

Jeepವೊಂದು ಚಿತ್ರದುದ್ದಕ್ಕೂ ಕಾಣಿಸುತ್ತದೆ. ಅದರ ರೂವಾರಿ art department ನವರಿಗೆ ಒಂದು ಸಲಾಂ.

ಸಂಕಲನಕಾರ ‘B.S.ಕೆಂಪರಾಜು’ ಅವರ ಈ ಸಿನಿಮಾ ಅವರ 200ನೆ milestone ಸಿನಿಮಾ . ಸಿನಿಮಾ ಅವಧಿಯನ್ನು 2 ಘಂಟೆಗೂ ಕಮ್ಮಿ ನೀಡಿ ಸಿನೆಮಾದ ತಿರುಳನ್ನು ಪ್ರೇಕ್ಷಕನಿಗೆ ಅರ್ಥೈಸುವಲ್ಲಿ ಇವರ ಕಾರ್ಯ ಶ್ಲಾಘನೀಯ.

ಸಿನೆಮಾದ ಸಂಭಾಷಣೆ ಚೆನ್ನಾಗಿದ್ದು , ವರ್ತಮಾನದ ಆಗುಹೋಗುಗಳನ್ನು ವ್ಯತಿರಿಕ್ತವಾಗಿ ಬಿಂಬಿಸಿದೆ. ಉದಾಹರಣೆಗೆ: ದೇಶಾನೆ ಕಾಯೋ ಸೈನಿಕನ ಮನೇನ ಒಂದಿಬ್ರು ಕಾಯಲ್ವಾ?’– Recentಆಗಿ pakistan ceasefireನಲ್ಲಿ ಸತ್ತ ಯೋಧರ ಮನೇಲಿ help maadoke ಯಾರು ಬಾರದೆ ಇದ್ದದ್ದು.

ಮನುಷ್ಯ ಭೂಮೀನ ಬಿಟ್ಟು ಚಂದ್ರನ ಹತ್ತಿರ ಹೋದರೂ , ಜಾತೀನ ಮಾತ್ರ ಬಿಡಲಿಲ್ಲ. ಈ ಸಾಲುಗಳನ್ನು  ಬರೆದಿರುವ ರಂಗಕರ್ಮಿ ‘ಸಿದ್ದಲಿಂಗಯ್ಯ ಹೊಂಬಾಳ್’ ರವರನ್ನು ನೆನೆಯುದೆ ಹೋದರೆ ತಪ್ಪಾದೀತು.

ಹೊಸ ಮ್ಯೂಸಿಕ್ ನಿಂದಾಗಿ ಸಂಗೀತ ನಿರ್ದೇಶಕ ‘ವಾಸುಕಿ ವೈಭವ್’ ಆಶಾಭಾವನೆಯನ್ನು ಕಟ್ಟಿಕೊಟ್ಟಿದ್ದಾರೆ. ಸಿನೆಮಾದ ಹಾಡುಗಳು ಅದರ lyrics ಮತ್ತೆ background score ಕಥೆಗೆ ಪೂರಕವಾಗಿದ್ದು ಸಿನೆಮಾವನ್ನು ಇನ್ನೊಂದು ಹೆಜ್ಜೆ ಮೇಲೇರಿಸಿದೆ .

 

ಗೊಂದಲಮಯವಾಗಬಹುದಾಗಿದ್ದ ಬೋಧನಾತೀತ ಕಥಾವಸ್ತುವೊಂದನ್ನು , ನಿರ್ದೇಶಕರ ಜಾಣ್ಮೆಯಿಂದ ,  ಚುರುಕಾದ ಸಂಭಾಷಣೆ ಹಾಗೂ ತಿಳಿಹಾಸ್ಯದ ಮುಖಾಂತರ ಎಲ್ಲರಿಗೂ ಅರ್ಥವಾಗುವಂತಹ ನಿಟ್ಟಿನಲ್ಲಿ linear narration ನೀಡಿ ಗೆದ್ದಿದ್ದಾರೆ . ಎಲ್ಲಾ ಹಂತಗಳಲ್ಲೂ perfect ಎನಿಸುವ ಈ ಚಿತ್ರ ಸತ್ಯಪ್ರಕಾಶರ ಮೊದಲನೇ ಪ್ರಯತ್ನ ಅಂದರೆ ನಂಬಲು ಕಷ್ಟ . ನಿರ್ದೇಶಕನ ಬದುಕು ಮತ್ತು ಕನಸೇ ಸಿನಿಮಾ ಆಗಿರುತ್ತೆ. ಈ ಸಿನಿಮಾ ಸೋತ್ತಿದ್ದೆ ಆದಲ್ಲಿ ಕನ್ನಡಿಗರು , ಶಂಕರ್ ನಾಗ್ ಅವರನ್ನು ಅವಮಾನ ಮಾಡಿದಂತೆಯೇ ಸರಿ.  

 

ಪರಿವರ್ತನೆ ಜಗದ ನಿಯಮ ಅಂತ ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ. ಕಳ್ಳನಾಗಿದ್ದ ವಾಲ್ಮೀಕಿ ಕೂಡ ಬದಲಾಗಿ ಮಹರ್ಷಿಯೆನಿಸಿ ರಾಮಾಯಣವನ್ನು ಬರೆಯುತ್ತಾನೆ . ಸಿನೆಮಾದ ಪ್ರಮುಖ ಸನ್ನಿವೇಶವೊಂದರಲ್ಲಿ ಬರುವ ಈ ಡೈಲಾಗ್ನಿಂದ ಒಂದು ಕ್ಷಣ ನಮ್ಮ ಕಣ್ಣಾಲಿಗಳು ತೇವವಾಗಬೇಕು ಇಲ್ಲಾ ಮೈಮೇಲಿನ ರೋಮಗಳೆಲ್ಲ ನವಿರೇಳಿಸಿ(Goosebumps) ನೋಡುಗರನ್ನು ಕಾಡಬೇಕು.  ಕುಡಿಯೋ ಗಾಳಿ ಹುಲಿಗೂ ಒಂದೇ.. ಹಸುವಿಗೂ ಒಂದೇ . ಮನುಷ್ಯನು ಕೂಡ ಪ್ರಾಣಿಯೇ ಆಗಿರುವಾಗ ಸಮಯಕ್ಕೆ ತಕ್ಕಂತೆ ಹುಲಿಯೂ ಆಗಿರ್ತಾನೆ . ಹಸುವೂ ಆಗಿರ್ತಾನೆ

ಇವೆರಡು ನಿಮಗೆ ಅನುಭವಕ್ಕೆ ಬಾರದೆ ಇದ್ದರೆ ದಯವಿಟ್ಟು ಚಿತ್ರಮಂದಿರದ ಹೊರಗಡೆ ಎದ್ದು ಬಂದುಬಿಡಿ ಮುಂದಿನ ಕಥೆ ನಿಮಗಲ್ಲ .

ಕಿವಿಗಡಚುವ ಅಬ್ಬರದ music, ಉದ್ದುದ್ದ dialogue, makeup-costume ಇದ್ಯಾವುದು ಬೇಡ. ಕಥೆ , screenplay, ಒಳ್ಳೆ ನಿರೂಪಣೆ ಇದ್ದರೆ ಸಾಕು ಅನ್ನೋ ಕನ್ನಡದ landmark ಸಿನೆಮಾಗಳಾದ ರಂಗಿತರಂಗ, ತಿಥಿ ಸಾಲಿಗೆ ಹೊಸ ಸೇರ್ಪಡೆ ರಾಮಾರಾಮಾರೇ.

Its raw and rustic to the local nativity. ಕನ್ನಡಿಗರ ಜೀವನದಲ್ಲಿ ಹಾಸುಹೊಕ್ಕಾದ serial ಹುಚ್ಚು , ಉಂಗುರ ಕಳ್ಕೊಳ್ಳೋದು , ದಿಗಿಲನ್ನು ಮರೆಮಾಚೋದು , ಆಣೆ-ಪ್ರಮಾಣ ಮಾಡೋದು , punch lineಗಳನ್ನ ಹೇಳೋದು , ಬುಡ್ಡಿ ದೀಪದಲ್ಲಿ ಕೈತುತ್ತು ತಿನ್ನೋದು , ಹರಿಕಥೆ ಬೆಂಬಲಿಸೋದು ಎಲ್ಲವೂ ಇಲ್ಲಿ ಕಾಣಸಿಗುತ್ತದೆ.

 

ಮೊದಲಾರ್ಧದಲ್ಲಿ ಸಿನೆಮಾದ ಗತಿ slow ಇತ್ತೇನೋ ಅಂತ ಅನಿಸುತ್ತದೆ . ಆದರೆ ಒಳ್ಳೆಯ ಸದೃಢ-ಸಮಗ್ರ ಕಥೆಯನ್ನೊಳಗೊಂಡ ದ್ವಿತೀಯಾರ್ಧ ಅದನ್ನ ನಿವಾರಿಸುತ್ತದೆ . ಈ ಸಿನೆಮಾದ ಬಗ್ಗೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ ಮೂಡಿರುವುದು ಉತ್ಪ್ರೇಕ್ಷೆಯೂ ಅಲ್ಲ , ಅತಿಶಯೋಕ್ತಿಯೂ ಅಲ್ಲ. ಸಿನಿಮಾ ಮಂದಿರದ ಹೊರಗಡೆ ಬಂದಾಗ ನಿಮ್ಮ ಮನಸಲ್ಲಿ ಉಳಿಯುವ ಸಾರ್ಥಕ್ಯ ಭಾವ . ಈ ಸಿನಿಮಾ ಹಿಂದಿನ ತಂತ್ರಜ್ಞರು ಆ ರಾಮ ದೇವರಿಗೆ ಬೆವರು,ರಕ್ತಾನ ನೀಡಿದ್ದಾರೆ. ಗೆಲ್ಲದೆ ಹೋದರೆ ಆ ದೇವರಿಗೂ ಮೊಸವಾದೀತು.

Verdict: ಇದೊಂದು Cult , Classy and Classic . Worth giving repeated visits at theatres and procuring a Blu-Ray disc for lifetime.

 

Rating: 4.0/5.0

 

-Pra.Sa.Ra

 

 

Do Read the Exclusive Interview of #RamaRamaRe director #Mr.Satyprakash here:

http://iruve.in/iruve%20blog/ramaramare-sathyadarshana

 

 

If you missed out listening to #Vasuki Vaibhav the maestro behind soulful #RamaRamaRe sensational music click here:

https://soundcloud.com/user-622829213/an-interview-with-vasuki-vaibhav

 

Music Review of #RamaRamaRe exclusively by Iruve is here:

http://iruve.in/iruve%20blog/Rama%20Rama%20Re%20Vasuki%20Vaibhav%20Kannada%20Music%20Review

 

4 Comment(s)

Rajesh R T:
22/10/2016, 07:52:15 PM
Reply

Nice review Pramod. Cinemadallina prathiyondu bhagavannu acchukattagi nimma vimarsheyalli chitthrisiddira.

pramod:
22/10/2016, 08:11:24 PM
Reply

Dhanyavadagalu Rajesh :-) keep watching this space for more interviews, reviews and podcasts

Suhas Nagaraj:
22/10/2016, 11:12:48 PM
Reply

I also watched it. U have covered most of the things bro.keep up gud work.

ಧನಂಜಯ:
25/10/2016, 05:54:38 PM
Reply

ನಿಮ್ಮ ವಾಟ್ಸಾಪ್ ಹಾಡು ಕನ್ನಡ ಲಿಪಿಯಲ್ಲಿ ಇದ್ದಿದ್ದರೆ ಕನ್ನಡ ಸೇವೆಯೂ ಆಗುತ್ತದೆ

Leave a Comment