ಸಂತೆಯಲ್ಲಿ ನಿಂತ ಕಬೀರ ಚಿತ್ರ ವಿಮರ್ಶೆ | Santeyalli Ninta Kabeera Movie Review

Posted by Pramod 30/07/2016 9 Comment(s)

೧೫ನೇಯ ಶತಮಾನದಲ್ಲಿ ಭಾರತದಲ್ಲಿ ಮುಖ್ಯವಾಗಿ ಇದ್ದಂಥ ಸಮಸ್ಯೆ ‘ಸಾಮರಸ್ಯ’ , ‘ಕೋಮುವಾದ’ ಮತ್ತು ‘ಒಂದು ಪಂಥದ ಜನರೊಳಗಿನ ಆಂತರಿಕ ಸಮಸ್ಯೆಯನ್ನ‘ ತಟ್ಟಿ ಕೇಳುವ, ನಿಷ್ಠುರವಾಗಿ ಎತ್ತಿ ಹಿಡಿದ ಸಮಾಜ ಸುಧಾರಕ. ಮನುಷ್ಯತ್ವ ಹಾಗೂ ಮಾನವ ಪ್ರೀತಿಗೆ ಬೆಲೆ ಕೊಟ್ಟ ಕವಿಯೋತ್ತಮ – ಕಬೀರ. ನಮ್ಮ ದೇಶ ಕಂಡ ಅತ್ಯದ್ಭುತ ಬರಹಗಾರರಲ್ಲಿ ಒಬ್ಬರಾದ ‘ಭೀಷ್ಮ್ ಸಾಹ್ನಿ‘ ಅವರ ‘ಕಬೀರ್ ಖಡಾ ಬಜಾರ್ ಮೇ ‘ ಅನ್ನುವ ಹಿಂದಿ ನಾಟಕದ ಕನ್ನಡದ ಅವತರಣಿಕೆ. ಈ ಸಿನಿಮಾದ ಬಹು ಭಾಗ ಕಬೀರರ ಹೋರಾಟದ ಬದುಕಾಗಿದೆ.

 

ಇದು ೧೫ನೆಯ ಶತಮಾನದ ವಾರಣಾಸಿಯ ಚಿತ್ರಣ. ಸಿನಿಮಾದಲ್ಲಿ ನಮ್ಮ ಕಬೀರ ಮುಸಲ್ಮಾನ ಕುಟುಂಬದಲ್ಲಿ ಬೆಳೆದರೂ, ಅವನ ಹುಟ್ಟು ಬ್ರಾಹ್ಮಣ. ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನುವಂಥ ನೇಕಾರನ ಮಗನ ಪಾತ್ರ. ಮಹಾತ್ಮ ಗಾಂಧೀಜಿಯವರಿಗೆ ಆದರ್ಶವಾಗಿದ್ದ ‘ಸಂತ ಕಬೀರರ’ ಈ ಕಥೆಯ ಮುಖ್ಯ ಪಾತ್ರವನ್ನ ಶಿವಣ್ಣ ಇಲ್ಲಿ ನಿರ್ವಹಿಸಿದ್ದಾರೆ. He has projected right amount of emotions in every scene. ಶಿವಣ್ಣನ ಬಿಟ್ಟು ಬೇರೆ ಯಾರು ಈ ಪಾತ್ರವನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ.ಯಾಕೆ ಈ ಮಾತು ಬಂತೆಂದರೆ,  ‘ಶಿವಣ್ಣ’ನ ಹತ್ತು ವರ್ಷದ call sheet bookಆಗಿದೆ ಅಂದಾಗ ಯಾರೋ ಮೂಗು ಮುರಿಯುತ್ತಿದ್ದರು. ಈ ಸಿನೆಮಾದಲ್ಲಿನ ಇವರ ನಟನೆಯನ್ನು ಅವರುಗಳು ನೋಡಿದೆ ಆದಲ್ಲಿ ಇನ್ನೊಮ್ಮೆ ಯೋಚಿಸುತ್ತಾರೆ. ಪ್ರಬುದ್ಧ ನಟನೆ ಶಿವರಾಜ್ ಕುಮಾರರದ್ದು.ತುಂಬಾ ಚಾಲೆಂಜಿಂಗ್ ಪಾತ್ರ ಇದಾಗಿದೆ. ಯಾಕಂದರೆ ಓದಿರುವ, ಕೇಳಿರುವ, ನೋಡಿರುವವರ ಅನುಕರಣೆ ಮಾಡುವಾಗ ಅವಘಡಗಳು ಆದಲ್ಲಿ, ನೋಡುಗರಲ್ಲಿ ಮುಜುಗರ ತರಿಸಬಹುದು. ಹೇಳಿ ಕೇಳಿ high schoolನಲ್ಲಿ history ಓದುವಾಗ ಕಬೀರ್ ದಾಸ್, ಸೂರ್ ದಾಸ್ ‘ ಭಕ್ತಿ ಪಂಥ’ ಪ್ರತಿಪಾದಿಸಿದವರು ಅಂತ ಓದಿದ್ದೀವಿ .ಅದ್ಯಾವುದೆ mistakeಗಳು ಆಗದಂತೆ ಎಚ್ಚರಿಸಿರುವ ನಿರ್ದೇಶಕ ‘ಇಂದ್ರ ಬಾಬು’ ಅವರ  homework ಎದ್ದು ಕಾಣುತ್ತದೆ. ನಿರ್ದೇಶಕನ ಜಾಣ್ಮೆ ಪ್ರತೀ frameನಲ್ಲೂ ನೋಡಸಿಗುತ್ತದೆ.   

 

 

ಕಬೀರನಿಗೆ ಮಡದಿಯಾಗಿ ಮಲಯಾಳಿ ನಟಿ ‘ಸಾನುಶ’ ನಟಿಸಿದ್ದಾರೆ. ಇವರು ‘ಲೋಯೀ’ ಪಾತ್ರಧಾರಿಯಾಗಿ ನ್ಯಾಯ ಒದಗಿಸಿದ್ದಾರೆ. ಪದ ಹೇಳುವ ಮೂಲಕ ಸಮಾಜದ ಹುಳುಕನ್ನ ಗೇಲಿ ಮಾಡುವ  ‘ಹೊನ್ನಾ’ characterನ ಪ್ರಶಾಂತ್ ಸಿದ್ದಿ, ಕಬಿರನ ತಾಯಿಯ ಪಾತ್ರಧಾರಿ ‘ಭಾಗೀರಥಿ ಬಾಯಿ ಕದಂ’ ಇಷ್ಟವಾಗುತ್ತಾರೆ. ಅನಂತ್ ನಾಗ್, ಶರತ್ ಲೋಹಿತಾಶ್ವ, ಶರತ್ ಕುಮಾರ್, ಅವಿನಾಶ್, ವೈಶಾಲಿ ದೀಪಕ್ ಎಲ್ಲರೂ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ಮಾಡಿರುತ್ತಾರೆ.  

ಕಬೀರರ ದೊಹಾಗಳು ಹೇಗೆ ಜನರ ಮನ ಮುಟ್ಟುತ್ತಿತ್ತೋ.. ಅದನ್ನು ಕನ್ನಡೀಕರಿಸಿ, ಚಿತ್ರದಲ್ಲಿ ಬಳಸಿ, ಎಂಥವರಿಗೂ ಅರ್ಥವಾಗುವಂತೆ ಮಾಡಿದ ‘ಗೋಪಾಲ್ ವಾಜಪೇಯಿ’ ಅವರ ಗೀತ ಸಾಹಿತ್ಯ ಅಮೋಘ.

ಹಿಂದಿ ಚಿತ್ರರಂಗದ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ‘ಇಸ್ಮಾಯಿಲ್ ದರ್ಬಾರ್ ‘( ಹಮ್ ದಿಲ್ ದೇ ಚುಕೆ ಸನಂ, ದೇವದಾಸ್  ) ಇದೆ ಮೊದಲ ಬಾರಿಗೆ ಕನ್ನಡ ಸಿನೆಮಾವೊಂದಕ್ಕೆ,  ಅದು ಕಬಿರನಿಗೆ ೫ ಹಾಡುಗಳು ಹಾಗು ೬ ದೊಹಗಳಿಗೆ ಸಂಗೀತ ಸಂಯೋಜಿಸಿ ಗೆದ್ದಿದ್ದಾರೆ. All songs are Situation based. ‘ಅವನೇ ಮಹಾದೇವ...’, ‘ಲೀಲಾಮಯನ ಮಾಯವೋ..’  ಹಾಡುಗಳು ತುಂಬಾ ಚೆನ್ನಾಗಿವೆ. ಮೊಹಮ್ಮದ ಇರ್ಫಾನ್, ಸೋನು ನಿಗಮ್ , ರಾಮಚಂದ್ರ ಹಡಪದ್ ಅವರ ದನಿಗಳಲ್ಲಿ, ಹಾಡುಗಳು ಇಂಪಾಗಿ ಮೂಡಿದೆ. ‘ಬಾರೆ ನಿನಗೆ ನಾನು’ ಅನ್ನೋ ಹಾಡಲ್ಲಿ Cinematographer ನವೀನ್ ಕುಮಾರ್ ಅವರ ಕಣ್ಣು ನೋಡಿರದ ಹೊಸ ವಿಷಯಗಳನ್ನ ತೋರಿಸಿ ಮೆರೆದಿದ್ದಾರೆ. ಮನಸ್ಸಿಗೆ ಹಿತವೆನಿಸುತ್ತದೆ. ಸಿನಿಮಾದಲ್ಲಿ ಚಿತ್ರೀಕರಿಸಿರುವ locations ಗಳು ಚೆನ್ನಾಗಿವೆ - ಬಹು ಪಾಲು ಕಾವೇರಿ ನದಿ ದಡದಲ್ಲಿ ಸೆರೆಹಿಡಿದಿದ್ದಾರೆ.

ಈ ಕೆಳಗಿನ ಸನ್ನಿವೇಶಗಳಲ್ಲಿನ ಸಿನೆಮಾದ ಸಂಭಾಷಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ : ಅನಂತನಾಗ್ ರವರು ಮಠ ತ್ಯಜಿಸುವುದು. ಕಬೀರನು ಗುರುಗಳ ಹತ್ರ ದೀಕ್ಷೆ ಬೇಡಿ ಬರುವುದು ಹಾಗೂ climax ನಲ್ಲಿನ ಕಬೀರ - ಲೋಧಿ ರಾಜನೊಂದಿಗಿನ ಮಾತುಗಳು. ಮುಖ್ಯ ಸನ್ನಿವೇಶವೊಂದರಲ್ಲಿ ಬರುವ ಈ ಡೈಲಾಗ್  ಮನಸ್ಸಿನಲ್ಲಿ ಉಳಿಯುತ್ತವೆ: “ಏನನ್ನು ಕಟ್ಟದೆ ಇರಬೇಕಯ್ಯ ಕಬೀರ , ಎನನ್ನು ಕೆಡುವದೆ ಇದು.”.

ಸಿನಿಮಾದಲ್ಲಿನ ಉರ್ದು ಮಿಶ್ರಿತ ಕನ್ನಡ ಕಥೆಗೆ ಪೂರಕವಾಗಿದ್ದು ಚೆನ್ನಾಗಿದೆ. ಸಿನಿಮಾದಲ್ಲಿ ಇಂಗ್ಲಿಷ್ subtitle ಇದೆ. which is a plus ಪಾಯಿಂಟ್. ಸಿನಿಮಾ ನೋಡುವಾಗ ನನ್ನ ಪಕ್ಕದಲ್ಲಿ ತಮಿಳಿನೋರ್ವರು ಕುಳಿತಿದ್ದರು. ಅವರು ಶಿವಣ್ಣನ dubbed ಸಿನಿಮಾಗಳನ್ನು ನೋಡಿ, ಮೆಚ್ಚುಗೆಯಿಂದ ಭಾಷೆ ಅರ್ಥವಾಗದಿದ್ದರೂ, ಬಂದಿದ್ದು subtitles ಇರುವ ಕಾರಣಕ್ಕಾಗಿಯೇ ಎಂದಾಗ ನನಗೆ ಒಳಗೊಳಗೆ ಖುಷಿ.ಈ ಕಬೀರನ ಕಥೆಯು ೬೦೦ ವರುಷ ಹಳೆಯದಾದರೂ , ಯಾವ ಕಾಲಘಟ್ಟದಲ್ಲೂ ನೋಡಬಹುದಾದ ಸಾರ್ವಕಾಲೀನ ಚಿತ್ರವಾಗಿದೆ. ತಂದೆ ರಾಜಕುಮಾರ್ ‘ಭಕ್ತ ಕನಕದಾಸರಾದರೆ’ ಮಗ ಶಿವು ‘ಸಂತ ಕಬಿರನೆನಿಸಿದ್ದಾರೆ’. ಇಬ್ಬರು ಪ್ರತಿಪಾದಿಸಿದ್ದು ಒಂದೇ. ‘ಕುಲದ ನೆಲೆಯನ್ನು ಧಿಕ್ಕರಿಸಿ , ಮನುಷ್ಯಧರ್ಮವನ್ನು ಪ್ರೀತಿಯ ಮೂಲಕ ಸಾರಿದ್ದು’.

 

Negatives

 

ಸಿನಿಮಾದಲ್ಲಿ ‘ನಾವು ಪ್ರೇಮದ ಹುಚ್ಚರು.. ‘ ಅನ್ನೋ ಮುಜ್ರಾ ಹಾಡೊಂದಿದೆ . ಆ ಹಾಡನ್ನು ಶೂಟ್ ಮಾಡಲು ಹಾಕಿರುವ ಸೆಟ್ ತುಂಬಾ artificial ಅನ್ನಿಸುತ್ತೆ. ಮತ್ತೆ ಆ ಹಾಡಿನಲ್ಲಿ ನಟಿ ಸಂಜನಾ ಗಲ್ರಾಣಿ ಹಾಕಿರುವ steps ನಾವು ಈ ಮುಂಚೆ ಹಿಂದಿ ಸಿನೆಮಾಗಳಲ್ಲಿ ನೋಡಿರುವಂತೆ ಅನ್ನಿಸಿ ಪೇಲವಾಗುತ್ತದೆ. ಸಿನಿಮಾದಲ್ಲಿ CGI graphics ಬಳಸಿ ಆನೆಯೊಂದನ್ನು ಮರು ಸೃಷ್ಟಿಸಿದ್ದಾರೆ. ಅದು ನೋಡಲು ಹಾಸ್ಯಾಸ್ಪದವಾಗಿದೆ. ಜನರು ಕಬೀರನನ್ನು ಹೊಡೆಯಲು ಬಂದಾಗ, ಸಂತನಾದ ಕಬೀರನು ಹಾಡು ಹೇಳಿದ  ಮಾತ್ರಕ್ಕೆ ಹೊಡೆಯದೆ , ಬದಲಾಗುತ್ತಾರೆ ಎನ್ನುವುದು ಬಾಲಿಷ. Cinematic liberty ಸ್ವಲ್ಪ ಹೆಚ್ಚಿಗೆ ತೊಗೊಂಡಿರೋದ್ರಿಂದ ಈಗಿನ ಕಾಲಕ್ಕೆ ಈ Historic Genre ಸರಿಹೋಗದೆ ಕೆಲವರಿಗೆ ಹಿಡಿಸುವುದಿಲ್ಲ. ಚಿತ್ರಕಥೆ ಬಿಡಿ ಬಿಡಿ ಉಪಕಥೆಗಳನ್ನ ಜೋಡಿಸಿದಂತಿದೆ. ಕಥೆ ಚೆನ್ನಾಗಿದ್ದ ಮಾತ್ರಕ್ಕೆ ಚಿತ್ರ ಪರಿಪೂರ್ಣ ಎನಿಸುವುದಿಲ್ಲ – ಕೆಲವು ದೃಶ್ಯಗಳು ಇನ್ನು ಪರಿಣಾಮಕಾರಿಯಗಬೇಕಿತ್ತು, specially ಕ್ಲೈಮಾಕ್ಸ್ . Second halfನಲ್ಲಿ ಸಿನಿಮಾದ ವೇಗ ಸ್ವಲ್ಪ ಮಂದ ಗತಿಯಲ್ಲಿ ಸಾಗಿ ಕ್ಲೈಮಾಕ್ಸ್ ಹೊತ್ತಿಗೆ ಸರಿಹೋಗುತ್ತದೆ.    

 

 

 

Verdict:

ಯಾರಿಗೆ ಸತ್ಯ ಹರಿಶ್ಚಂದ್ರ ಸಿನಿಮಾದ ‘ಕುಲದಲ್ಲಿ ಕೀಳು ಯಾವುದೋ ಹುಚ್ಚ್ಚಪ್ಪ ‘ ಹಾಡು ಇಷ್ಟವೋ, ಅವರಿಗೆ ಈ ‘ಕಬೀರ’ ಇಷ್ಟವಾಗುತ್ತಾನೆ. ದೇವರನ್ನು ಕಾಣುವುದು ಪ್ರೀತಿಯ ರೂಪದಲ್ಲಿ , ಮಂದಿರ – ಮಸೀದಿಗಳಲ್ಲಿ ಅಲ್ಲ ಎನ್ನುವ ಪ್ರೀತಿಯ ಸಾರಥಿ ಕಬೀರ. ಚಿಕ್ಕ ಪುಟ್ಟ ನ್ಯೂನತೆಗಳನ್ನ ಹೊರೆತುಪಡಿಸಿ ಸಿನಿಮಾ ಸೊಗಸಾಗಿದ್ದು ಮನೆಮಂದಿಯೆಲ್ಲಾ ನೋಡಲೇಬೇಕಾದ ಅದ್ಭುತ ದೃಶ್ಯ-ಕಾವ್ಯ.

 

Rating: 3.25/5.00

Reviewed by: ಪ್ರ.ಸಾ.ರಾ

      

9 Comment(s)

Suhas Nagaraj:
30/07/2016, 05:11:10 PM
Reply

Nice review

pramod:
30/07/2016, 05:51:51 PM

ಧನ್ಯವಾದಗಳು.. ಈ ಚಿತ್ರವನ್ನು ಚಿತಮಂದಿರದಲ್ಲಿಯೇ ನೋಡುವಂತವರಾಗಿ :) ಸಾಧ್ಯವಾದರೆ, ನಮ್ಮ ಇರುವೆ ತಂಡದ ಈ websiteನ ಒಮ್ಮೆ ನೋಡಿಬಂದು ನಮ್ಮನ್ನು ಉತ್ತೇಜಿಸಿ ...

Vanita satish:
30/07/2016, 06:04:42 PM

ತುಂಬಾ ಚೆನ್ನಾಗಿದೆ

Jayanth Hiremath:
30/07/2016, 05:35:20 PM
Reply

Indeed a thorough review of the movie. After the review waiting to watch the movie.

ಪ್ರಮೋದ್:
30/07/2016, 05:52:23 PM

ಧನ್ಯವಾದಗಳು ಜಯಂತ್.. ಈ ಚಿತ್ರವನ್ನು ಚಿತಮಂದಿರದಲ್ಲಿಯೇ ನೋಡುವಂತವರಾಗಿ :) ಸಾಧ್ಯವಾದರೆ, ನಮ್ಮ ಇರುವೆ ತಂಡದ ಈ websiteನ ಒಮ್ಮೆ ನೋಡಿಬಂದು ನಮ್ಮನ್ನು ಉತ್ತೇಜಿಸಿ ...

Sourabha bhatt:
30/07/2016, 05:45:45 PM
Reply

Good critic..

ಪ್ರಮೋದ್:
30/07/2016, 05:52:51 PM

ಧನ್ಯವಾದಗಳು ಸೌರಭ.. ಈ ಚಿತ್ರವನ್ನು ಚಿತಮಂದಿರದಲ್ಲಿಯೇ ನೋಡುವಂತವರಾಗಿ :) ಸಾಧ್ಯವಾದರೆ, ನಮ್ಮ ಇರುವೆ ತಂಡದ ಈ websiteನ ಒಮ್ಮೆ ನೋಡಿಬಂದು ನಮ್ಮನ್ನು ಉತ್ತೇಜಿಸಿ ...

pramod:
30/07/2016, 05:56:54 PM
Reply

ಈ ಚಿತ್ರತಂಡದಿಂದ ಒಂದು ಒಳ್ಳೆಯ ಪ್ರಯತ್ನ.. Go with Zero Expectations :)

Aishwarya:
30/07/2016, 06:22:52 PM
Reply

Nice one

pramod:
30/07/2016, 06:25:39 PM

Thank You :)

Pradyot:
30/07/2016, 06:35:25 PM
Reply

Nice review

ಪ್ರಮೋದ್:
30/07/2016, 10:27:55 PM

ಧನ್ಯವಾದಗಳು.. ಈ ಚಿತ್ರವನ್ನು ಚಿತಮಂದಿರದಲ್ಲಿಯೇ ನೋಡುವಂತವರಾಗಿ :) ಸಾಧ್ಯವಾದರೆ,ಇಷ್ಟವಾದರೆ ನಮ್ಮ ಇರುವೆ ತಂಡದ ಈ websiteನ ಒಮ್ಮೆ ಕಣ್ಣು ಹಾಯಿಸಿ ಹರಸಿ - ಬೆಳೆಸಿ ...

RAJESH:
30/07/2016, 09:34:27 PM
Reply

Nice review Prami

ಪ್ರಮೋದ್:
30/07/2016, 10:28:46 PM

ಧನ್ಯವಾದಗಳು ರಾಜೇಶ್..

Vinod:
01/08/2016, 03:50:22 PM
Reply

Good one pramod..

Ashwath Vellur Nagaraju:
02/08/2016, 08:36:41 AM
Reply

Nice one pramond

Leave a Comment