LET NO SINS OF MAN GO UNPUNISHED - ಶುದ್ಧಿ

Posted by vinay 27/02/2017 0 Comment(s)

ಕನ್ನಡ ಸಿನೆಮಾದ ಪರ್ವ ಕಾಲ ನಡೆಯುತ್ತಿದೆ! - ಅಜಯ್ ರಾಜ್

 

ಶುದ್ಧಿ ಟ್ರೈಲರ್ ನೋಡಿದ್ ಮೇಲೆ ಎಲ್ಲರ ಬಾಯಲ್ಲಿಯೂ ಒಂದೇ ಮಾತು ,  ಹಾಲಿವುಡ್ ಲೆವೆಲ್ ಗೆ ಒಂದು ಕನ್ನಡ ಸಿನೆಮಾ

ತೆಗೆದಿದ್ದಾರೆ! ಅಷ್ಟೊಂದು ಮನೋಜ್ಞವಾಗಿ, ಅಷ್ಟೊಂದು ಕುತೂಹಲ ಹುಟ್ಟಿಸಿದೆ “ಶುದ್ಧಿ” ಸಿನೆಮಾ!

ಟ್ರೈಲರ್ ನಲ್ಲಿ ಕಂಡರೂ ಕಾಣದಂತೆ ಬಂದು ಹೋಗುವ ನಮ್ಮ ಅಜಯ್ ಅವ್ರ್ನ ಮಾತಾಡ್ಸಿದ್ವಿ,

ನಮ್ಮ ಸಂಭಾಷಣೆಯ ತುಣುಕು ಇಲ್ಲಿದೆ

 

Ajay Raj

 

ಹೊಸಬರ ಚಿತ್ರ “ಶುದ್ಧಿ”. ಆದರೂ ಟ್ರೈಲರ್ಗೆ ದೊಡ್ಡ ಮಟ್ಟಿಗೆ ರೆಸ್ಪಾನ್ಸ್ ಕೊಟ್ಟಿದಾರೆ ಕನ್ನಡ ಜನತೆ ಏನ್ ಹೇಳೋಕ್ ಇಷ್ಟ ಪಡ್ತೀರಾ ?

 

ಲೂಸಿಯಾ ಸಿನೆಮಾ ಕನ್ನಡ ಸಿನೆಮಾ ಕ್ಕೆ ಹೊಸ ಆಯಾಮ ಕೊಟ್ಟಿದೆ ಅಂದ್ರೆ ಉತ್ಪ್ರೇಕ್ಷೆ ಅಲ್ಲ .ಕನ್ನಡ ಸಿನಿ ಪ್ರೇಕ್ಷಕರು ಕೂಡ

ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟುತ್ತ ಬಂದಿದ್ದಾರೆ. ಒಂದು ಒಳ್ಳೆ Content ಇರೋ ಸಿನೆಮಾ ಕೊಟ್ರೆ ಪ್ರೇಕ್ಷಕರು ಕೈಬಿಟ್ಟಿಲ್ಲ. They are

accepting un conventional movies also. ನಮ್ಮ ಸಿನಿಮಾನೂ ಒಪ್ಕೋಳ್ತಾರೆ ಅನ್ನೋ ಭರವಸೆ ಇದೆ

 

ಶುದ್ಧಿ; ಕಥಾವಸ್ತು ಬಗ್ಗೆ ಏನ್ ಹೇಳ್ತೀರಾ ?

 

ನಮ್ಮ ದೇಶದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ವಿರುದ್ಧ ಮಾಡಿರುವ concept. ಮೂರು ನೈಜ ಘಟನೆಗಳ ಆದಾರದ ಮೇಲೆ

ರಚಿಸಿದೆ ಕಾಲ್ಪನಿಕ ಚಿತ್ರ ಇದು . ಹೆಸರೇ ಹೇಳುವಾಗೆ ಶುದ್ಧಿ ಅಂದರೆ -Purification. “ನಮ್ಮ ಆಲೋಚನೆಗಳು ಶುದ್ಧಿ ಆದಾಗಲೇ

ನಾವು ಆಂತರಿಕವಾಗಿ ಶುದ್ಧವಾಗಿರಲು ಸಾಧ್ಯ” ಅನ್ನೋದನ್ನ ಸಿನೆಮಾ ಮುಖಾಂತರ ತೋರ್ಸಿದೀವಿ.

 

visuals ಮತ್ತು background score ಬಗ್ಗೆ ?

ಆದರ್ಶ್ ಅವರು ಸಿನೆಮ್ಯಾಟೋಗ್ರಾಫರ್ ಗಾಗಿ ಹುಡುಕಾಟದಲ್ಲಿದಾಗ, ಆಂಡ್ರೂ ಅವರ ಒಂದು ಕಂಟೆಂಟ್ ಆನ್ಲೈನ್  ನಲ್ಲಿ ಸಿಕ್ಕಿತ್ತು. ಅವರ ವರ್ಕ್ ಇಷ್ಟವಾಗಿ ಆದರ್ಶ್ ಶುದ್ಧಿ ಸಿನೆಮಾದ ಸ್ಕ್ರಿಪ್ಟ್ ಅವರಿಗೆ ಕಳಿಸಿದ್ರು. ಸ್ಕ್ರಿಪ್ಟ್ ಓದಿ ಈ ಸಿನೆಮಾಗೆ  ಒಪ್ಪಿಕೊಂಡ್ರು ಆಂಡ್ರೂ.  

ಈ ಸಿನೆಮಾಗೆ ಹಿನ್ನೆಲೆ ಸಂಗೀತ, ಒರಿಜಿನಲ್ ಸೌಂಡ್ ಟ್ರ್ಯಾಕ್ ಎಲ್ಲಾ ಜೆಸ್ಸಿ ಕ್ಲಿಂಟನ್ ಅವರು ಮಾಡಿದ್ದು.
 Background score ಸಿನಿ ಮಾದ ಬೆನ್ನಲಬು ಅಂತಾನೆ ಹೇಳ್ಬೇಕು.ಚಿತ್ರದಲ್ಲಿ ಒಂದೇ ಹಾಡು ಇರೋದು ಅದನ್ನ "ರಾಮ ರಾಮ ರೇ "ಖ್ಯಾತಿಯ ನೊಬಿನ್ ಅವ್ರು ಮಾಡಿದ್ದಾರೆ. ಅದೂ ಕೊಡ ಅದ್ಭುತವಾಗಿ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಆಡಿಯೋ ರಿಲೀಸ್ ಮಾಡ್ತೀವಿ

 

ಸಿನೆಮಾದಲ್ಲಿ ನಿಮ್ಮ ಪಾತ್ರ ?

 

ಟ್ರೈಲರ್ ನಲ್ಲಿ ಒಂದೇ ಶಾಟ್ ಅಲ್ಲಿದಿನಿ ಆದರೆ ಸಿನೆಮಾ ದಲ್ಲಿ ನನ್ನದು ಅತಿ ಬಹುಮುಖ್ಯ ಪಾತ್ರ ಅಂತಾನೆ ಹೇಳ್ಬವುದು. ಆದರೆ ಜಾಸ್ತಿ

ಏನು ಹೇಳಲ್ಲ . ಸಿನೆಮಾ ನೋಡಿ :) ನಾನು ಉತ್ತಮ ವಿಲ್ಲನ್ ಸಿನೆಮಾ ಮಾಡೋ ಟೈಮ್ ಅಲ್ಲಿ ಆದರ್ಶ್ ಫೋನ್ ಮಾಡಿದ್ರು.

ಮುಂಚೆ ಅವರ ಜೊತೆ ಕಿರುಚಿತ್ರ ಮಾಡಿದ್ದೆ. ಇಂತಹ ಒಂದು ಒಳ್ಳೆ ಸಿನೆಮಾ ಹಾಗೂ ಒಳ್ಳೆ ಪಾತ್ರ ಕೊಟ್ಟ ಆದರ್ಶ ಗೆ ಹಾಟ್ಸ್ ಆಫ್

 

ಕೊನೆಯದಾಗಿ ನಮ್ಮ ಕನ್ನಡಾಭಿಮಾನಿಗಳಿಗೆ ಒಂದೆರಡು ಮಾತು ?

 

ನಾನು ಆಗ್ಲೇ ಹೇಳಿದಂಗೆ , ಅವ್ರು ಹೊಸಬರ ಸಿನೆಮಾ ನೋಡ್ತಿದಾರೆ ಹಾಗೆ ಹೊಸ ಹೊಸ ಕಲಾವಿದರು ಒಳ್ಳೊಳ್ಳೆ

ಕ್ವಾಲಿಟಿ ಕಂಟೆಟ್ನ್ ಕೊಡ್ತಿದಾರೆ. ಸೂಪರ್ ಸ್ಟಾರ್ಸ್ ಇಲ್ದಿರೋ ಸಿನೆಮಾ ಗೆಲ್ಲಿಸ್ತಿರೋ ಕನ್ನಡ ಪ್ರೇಕ್ಷಕನೇ ನಿಜವಾದ ಸೂಪರ್ ಸ್ಟಾರ್.

ನಮ್ಮ ಸಿನೆಮಾ ದಯವಿಟ್ಟು ನೋಡಿ ಪ್ರೋತ್ಸಾಹ ವಿರಲಿ

 

ಕನ್ನಡ ಸಿನೆಮಾ ಪರ್ವಕಾಲ ಇದು .ಅಂತಹ ಒಳ್ಳೆ ಸಿನೆಮಾಗಳ ಸಾಲಿನಲ್ಲಿ ಶುದ್ಧಿ ಕೂಡ ಸೇರಲಿ ಅಂತ ಇರುವೆ  ಟೀಮ್ ಇಂದ ಶುಭ

ಹಾರೈಕೆ.

AND

“LET NO SINS OF MAN GO UNPUNISHED

 

Leave a Comment