COMA Kannada Movie Review

Posted by iruve 30/05/2016 0 Comment(s)

'ಕೋಮಾ' ಇನ್ನೂ ನೋಡಿಲ್ವಾ ಅಥ್ವಾ ನೋಡಕ್ಕೆ ಚಿತ್ರಮಂದಿರ ಇಲ್ವಾ?

೧. ಯಾವ್ದು ಈ Filmu ? ಯಾರದ್ದು?
"ಕೋಮಾ" ಇದು ಸಂಪೂರ್ಣ ಹೊಸಬರ ಪ್ರಯತ್ನ. ವಿವಿಧ ಐ.ಟಿ ಕಂಪನಿ ಗಳಲ್ಲಿ ಕೆಲಸ ಮಾಡುತ್ತಿದ್ದ ಸಮಾನ ಮನಸ್ಕರು ಒಟ್ಟಾಗಿ, ಒಂದು ಸೃಜನಶೀಲ ದೃಶಕಾವ್ಯವನ್ನು ತೆರೆಗೆ ತಂದಿದ್ದಾರೆ.  
ನಿರ್ದೇಶನ: ರವಿ ಮತ್ತು ಚೇತನ್.    ನಾಯಕ ನಟ: ಕಾರ್ತಿಕ್   ನಾಯಕ ನಟಿ: ಶ್ರುತಿ   ಸಂಗೀತ: ಆಶಿಕ್ ಅರುಣ್.

೨. ಹೆಂಗಿದೆ ಮೂವಿ? ನೋಡ್ಬೌದ?
ಕೊಟ್ಟ ಕಾಸಿಗೆ ಮೋಸ ಇಲ್ಲದೆ, 3 ಘಂಟೆ ಗಳ ಕಾಲ ಸುಂದರ ಮಲೆನಾಡಿನ ಮೋಡಗಳಲ್ಲಿ ತೇಲಿ ಒಂದು romantic comedy ಯನ್ನು ನೋಡಲು ಕೋಮಾ ಒಳ್ಳೆ ಸಿನಿಮಾ. ಯಾವುದೇ ಈ comedy ಸೀನ್ ಗಳಲ್ಲಿ ಅಶ್ಲೀಲತೆ ಗೆ ಆಸ್ಪದ ಕೊಡದೆ ಮನೆಯವರ ಜೊತೆ ಹೋಗಿ ನೋಡಲು ಸೂಕ್ತವಾಗಿದೆ.
 
೩.ಕೋಮಾ ಗೆಲ್ಲುವುದು ಎಲ್ಲಿ ? 
1.Cinematography.:  ಸಕಲೇಶಪುರ, ಮೂಡಿಗೆರೆ , ಉತ್ತರ ಕರ್ನಾಟಕ ಹಾಗೂ ಇನ್ನೂ ಹಲವು ಜಾಗಗಳನ್ನು 
ಇತಿ ಸುಂದರವಾಗಿ ಚಿತ್ರಿಸಿದ್ದಾರೆ ಕಾರ್ತಿಕ್ ಮಲ್ಲೂರ್. ಇವರ ಈ ಕೆಲಸಕ್ಕೆ Hats Off..
2. ಸಂಗೀತ : ಆಶಿಕ್ ಅರುಣ್ ಅವರ ಸಂಗೀತ ಇಂಪಾಗಿದೆ. ಚಿತ್ರರಂಗಕ್ಕೆ ಇವರು ಹೊಸಬರು ಎಂದು ನಂಬಲು ಅಚ್ಚರಿಯಾಗುವಂತಿದೆ. ಇವರ "ತನ್ಮಯ ವಿಸ್ಮಯ" ಇಂದಿಗೂ Youtubeನಲ್ಲಿ ಹಿಟ್.
 
3.ನಟನೆ : ಕಾರ್ತಿಕ್ ಹಾಗು ಶೃತಿ ಯವರ ನಟನೆ  ಯಾವ seasoned actors ಗಳಿಗೂ ಕಮ್ಮಿ ಇಲ್ಲ. ಕಾರ್ತಿಕ್ ಅವರಿಗೆ ಇದು ಮೊದಲ ಚಿತ್ರವಾದರೂ ಅವರು ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
 
 
 
೪.ಕೋಮಾ ಸೋಲುವುದು ಎಲ್ಲಿ ?
ಇದು ಹೊಸಬರ ಪ್ರಾಮಾಣಿಕ ಪ್ರಯತ್ನ. ಸಹಜವಾಗಿ ತಪ್ಪುಗಳು ನುಸುಳಿವೆ. ಈ ಕೆಳಕಂಡ ವಿಷಯಗಳಿಗೆ ಸಿನಿಮಾ ನೋಡುವದನ್ನು ಬಿಡಬೇಡಿ. ಸಿನಿಮಾದ ಬಗ್ಗೆ ನಮ್ಮ ಅನಿಸಿಕೆ ಇದು. ನಿಮ್ಮ ಅನಿಸಿಕೆ ಇದರ ತದ್ವಿರುದ್ಧವಾಗಿರಬಹುದು.
1. ಕಥೆ: ಕಥೆ predictable ಅನಿಸುತ್ತದೆ. ಮೊದಲಾರ್ಧದಲ್ಲಿ ಕುಂಟುತ್ತಾ ಸಾಗುವ ಕಥೆ ದ್ವಿತೀಯಾರ್ಧದಲ್ಲಿ ವೇಗ ಪಡೆದುಕೊಳ್ಳುತ್ತದೆ.
2. ಅನವಶ್ಯಕ ಸೀನ್‌ಗಳು: For example ಚಿತ್ರದಲ್ಲಿ ಬರುವ ಮೊದಲ fight ಸೀನ್ ತೀರಾ ಅನವಶ್ಯಕ ಅನಿಸುತ್ತದೆ. ಇದರ ಮಧ್ಯ ದೇವಸ್ಥಾನದ ಮಧ್ಯ ನಾಟ್ಯ ಕಲಿಯುತ್ತಿದ್ದ ಯಾರೋ ಬಂದು ಹೋಗುತ್ತಾರೆ.  ಇವರು ಯಾಕೆ ಬಂದರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹೇಗೆ ಮೊದಲಾರ್ಧದಲ್ಲಿ ಅನೇಕ ಸೀನ್‌ಗಳು continuity ಇಲ್ಲದೆ ಒಣಗುತ್ತವೆ. ಹಾಗೂ ನಿರ್ದೇಶಕರು ತಮ್ಮ ಕ್ರಿಯೇಟಿವ್ ಲಿಬರ್ಟಿಯನ್ನು ಅತಿಯಾಗಿ ಬಳಸಿಕೊಳ್ಳುವುದು ಗೋಚರಿಸುತ್ತದೆ.
3. ಕೆಲವೊಮ್ಮೆ ಕಿರಿ ಕಿರಿ ಎನಿಸುವ comedy:  ಚಿತ್ರದುದ್ದಕ್ಕೂ ಹೀರೊ ಬಳಿ ಇರುವ ಅವನ ಸ್ನೇಹಿತರು ಕಥೆಗೆ ಹೆಚ್ಚು ಪೂರಕವಾಗಿರದೆ ಬರೀ comedyಗೆ ಮಾತ್ರ ಸೀಮಿತವಾಗಿ ಬಿಟ್ಟಿದ್ದಾರೆ. ಕೆಲವೊಂದು ಭಾಗದಲ್ಲಿ ಹಾಸ್ಯ ಅಪಹಾಸ್ಯವಾದರೂ ಚಿತ್ರ ವೇಗ ಪಡೆದುಕೊಂಡು ಆದ ನಷ್ಟವನ್ನು ಸರಿದೂಗಿಸುತ್ತದೆ.
 
೫.ಎನ್ ಗುರು ಇವಾಗ ನೋಡ್ಬೇಕಾ ಬೇಡ್ವಾ?

ಖಂಡಿತ ನೋಡ್ಬೇಕು. ಸುಚೇಂದ್ರ ಪ್ರಸಾದ್, ಗುರುಪ್ರಸಾದ್, ಭಗವಾನ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ವದಗಿಸಿದ್ದಾರೆ. ಚಿತ್ರದಲ್ಲಿ ಲೋಪಗಳಿದ್ದರೂ ಅದು highlight ಆಗುವ ಮೊದಲೇ ಬೇರೆ ಯಾವುದಾದರೂ ವಸ್ತು ತಕ್ಷಣ ಆಗಮಿಸಿ ಆಗಬುಹುದಾದ damage ಅನ್ನು ಸರಿದೂಗಿಸುತ್ತದೆ. ಮೊದಲ ಪ್ರಯತ್ನವಾದರೂ ನಿರ್ದೇಶಕರು ಚಿತ್ರವನ್ನು ಅಚ್ಚುಕಟ್ಟಾಗಿ ತಂದಿಡುವಲ್ಲಿ ಗೆದ್ದಿದ್ದಾರೆ. 

ಈಗ ಚಿತ್ರ ಚಿತ್ರಮಂದಿರ ಸಿಗದೆ  ಕೋಮಾದಿಲ್ಲಿರುವುದು ಕಾಣಿಸುತ್ತಿದೆ. ಹೀಗೆ ಅಂತೀರಾ? ಕೆಳಗಿನ ಕಿರಿಕ್ ಕೀರ್ತಿ ಅವರ ವೀಡಿಯೋ ನೋಡಿ.
 

 
 

 
 
 

Leave a Comment