ಮೀಡಿಯಾ"ಯಿಂದ "ಮೂವಿ" ಗೆ : ಚಂದನ್ ಶರ್ಮ ಅವರ ಅದ್ಭುತ ಜರ್ನಿ !

Posted by vinay 16/03/2017 0 Comment(s)

'ಮೀಡಿಯಾ'ಯಿಂದ 'ಮೂವಿ' ಗೆ : ಚಂದನ್ ಶರ್ಮ ಅವರ ಅದ್ಭುತ ಜರ್ನಿ !

ಮಹಿಳಾ ಪ್ರಧಾನವಾದ ಸಿನೆಮಾಗಳು ಸಾಲು ಸಾಲಾಗಿ ಬರುತ್ತಿರುವಾಗಲೇ. ಬಿಟಿವಿಯ ನಮ್ಮ ಚಂದನ್ ಅಣ್ಣ ಮೊದಲ ಬಾರಿ ನಟನಾಗಿ ಅಭಿನಯಿಸಿದ "ಧ್ವನಿ " ಸಿನೆಮಾ ಟ್ರೈಲರ್ ನೋಡಿದೆ. ಪ್ಲೀಸ್ ನೋಟ್ " Men Do Cry! " ಅಂತ ಶುರುವಾಗೋ ಟ್ರೈಲರ್ ಕನ್ನಡ ಸಿನೆಮಾದಲ್ಲಿ ಮೊತ್ತೊಂದು Expiremental ಸಿನೆಮಾ ಅಂತ ಅನ್ಸ್ತು.

ತಡ ಮಾಡದೆ ಫೋನ ಮಾಡ್ದೆ. ಸ್ವಂತ ತಮ್ಮನ ಜೊತೆ ಮಾತಾಡೋತರ ಮಾತಾಡಿದ್ರು. ಏನೇನು ಹೇಳಿದ್ರು ? ಇಲ್ಲಿದೆ ನಮ್ಮ Conversation

 

->ಚಂದನ್ ಅಣ್ಣ ಮೊದಲ ಬಾರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬರುತ್ತಿದ್ದಿರಾ. Hearty congratulations! "ಧ್ವನಿ "ಸಿನೆಮಾದ ಬಗ್ಗೆ ಏನು ಹೇಳುತ್ತೀರಾ ?

ಥ್ಯಾಂಕ್ಸ್ ತಮ್ಮ :) "ಧ್ವನಿ " ಸಿನೆಮಾ ಇದು ಪುರಷರ ಧ್ವನಿ. ಒಂದು ಹೆಣ್ಣು ಶೋಷಣೆಗೆ ಒಳಗಾದರೆ, ಸಮಸ್ಯೆಗೆ ಸಿಲುಕಿದರೆ, ನೋವಿನಲ್ಲಿದರೆ ಸ್ಪಂದಿಸುವ, ಸಹಾಯಕ್ಕೆ ನಿಲ್ಲುವ ಅನೇಕ ಮಹಿಳಾ ಸಂಘಗಳು, ಅವರಿಗಂತಲೇ ಮಾಡಿರುವ ಕೆಲವು ನ್ಯಾಯಾಂಗ ತಿದ್ದುಪಡಿಗಳು ಹೀಗೆ ಅನೇಕರಿಂದ ಒಂದು ಹೆಣ್ಣಿಗೆ ಬೆಂಬಲ ಸಿಗುತ್ತೆ ಹಾಗು ಅವಳಿಗಾದ ಅನ್ಯಾಯ ಒಂದು ನ್ಯಾಯ ಕೊಡಿಸುವ ಒಂದು ಸಿಸ್ಟಮ್ ಆಲ್ರೆಡಿ ಇದೆ . ಹಾಗೆಯೇ ಪ್ರತಿಯೊಬ್ಬ ಪುರಷನಿಗೂ ಅವನದೇ ಆದ ಒಂದು ನೋವು , ಸಂಕಟ, ಸಮಸ್ಯೆ ,ಒದ್ದಾಟ, ಹಂಬಲ ಹೀಗೆ ನೂರಾರು ತುಮುಲಗಳು ಇದ್ದೆ ಇರುತ್ತೆ. ಅಂತಹ ಪುರಷರಿಗೆ ಆದ ಅನ್ಯಾಯಕ್ಕೆ ಒಂದು ಧ್ವನಿಯೇ ನಮ್ಮ ಸಿನೆಮಾ!. ಬಹುಶ: ಇಂತಹ ಕಾನ್ಸೆಪ್ಟ್ /ಪ್ರಯೋಗ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಂದಿದೆ ಇಂತಹ ಕಾನ್ಸೆಪ್ಟ್ ಇಟ್ಕೊಂಡು ಕಥೆ , ಸಂಭಾಷಣೆ ಬರೆದಿದ್ದು ಕೃಷ್ಣೇಗೌಡ್ರು. ಚಿತ್ರವನ್ನು ಸೆಬಾಸ್ಟಿನ್ ಡೇವಿಡ್ ಅವರು ಡೈರೆಕ್ಟ್ ಮಾಡಿದ್ದಾರೆ. ಈ ಸಿನೆಮಾ Raw subject ಆಗಿರೋದ್ರಿಂದ ಹಾಡುಗಳು ಇಲ್ಲ. ಬಿಟ್ಸ್ ಸಾಂಗ್ಸ್ ಗಳಿವೆ ಇತಿ ಆಚಾರ್ಯ, ವಿನಯಾಪ್ರಸಾದ್ , ರಮೇಶ್ ಭಟ್ ಅವರು ಸಿನೆಮಾದಲ್ಲಿ ನಟಿಸಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಮ್ಮ ಸಿನಿಮಾ ಕೂಡ ಪ್ರದರ್ಶ ನಗೊಂಡಿದ್ದು ನಮಗೆ ಬಹಳ ಖುಷಿ.

 

->>ಬಳ್ಳಾರಿಯ ಬಡಕುಟುಂಬದಿಂದ ಬಂದು ಮೀಡಿಯಾ ದಲ್ಲಿ ನಿಮ್ಮದೇ ಶೈಲಿಯಲ್ಲಿ ವಾರ್ತೆ ಓದುತ್ತ ಜನರ ಪ್ರೀತಿ ಗಳಿಸುತ್ತ ಇಂದು ಬೆಳ್ಳಿತೆರೆಗೆ ಬಣ್ಣ ಹಚ್ಚಿದ್ದೀರಾ What do you say about this inspiring journey ?

ಚಿಕ್ಕ ವಯಸ್ಸಿಂದಲೂ ಸಾಮಾಜಿಕ ಕಳಕಳಿ ಇದ್ದೆ ಇತ್ತು. ನನಗೆ ಬಡತನ ಕಳಿಸಿದ ಪಾಠಗಳು ನನ್ನನ್ನು ಸಮಾಜಮುಖಿಯನ್ನಾಗಿಸಿತ್ತು. ಬಹುಶ ಸಮಾಜಕ್ಕೆ ಏನಾದ್ರು ಮಾಡಬೇಕೆಂಬ ಹುಚ್ಚು, ಕಿಚ್ಚುಅಲ್ಲಿಯೇ ಹುಟ್ಟಿಕೊಂಡಿತ್ತು. ೨೦೦೯ ರಲ್ಲಿ ನನ್ನ ಅಣ್ಣನ ನಿಧನ ನನ್ನ ಮೇಲೆ ಪ್ರಭಾವ ಬೀರಿದ್ದು ನಿಜ. ಬಹುಶ: ಅಲ್ಲಿಂದಲೇ ಬದುಕನ್ನು ನೋಡುವ ನನ್ನ ದೃಷ್ಟಿಬದಲಾಯಿತು ಅಂತ ಅನ್ಸುತ್ತೆ. ಮೊದಲಿಗೆ ಜನ್ರಶ್ರೀ ಇವಾಗ ಬಿಟಿವಿ. ಮೀಡಿಯಾ ಗೆ ಬಂದು ಏಳು ವರ್ಷವಾಯ್ತು. ಮನೆಮಗ ತರ ಕನ್ನಡಿಗರು ನನ್ನ ಪ್ರೀತಿಸಿದ್ದಾರೆ. ಅದಕ್ಕೆ ನಾನು ಯಾವಾಗಲು ಆಭಾರಿ. ಟೀಕೆ ಮಾಡೋರು ಕೊಡ ಇದಾರೆ. ದುಡ್ಡು ಇಸ್ಕೊಂಡು ನ್ಯೂಸ್ ಕೊಡ್ತಾರೆ ಅಂತ ಮಾತು ಕೇಳಿದೀನಿ ಆದರೆ ಅವೆಲ್ಲ ಸುಳ್ಳು. ನನ್ನದೇ ಆದ ಫಿಲಾಸಾಫಿ ಅಲ್ಲಿ ನಾನು ಬದುಕುತ್ತಿದ್ದೇನೆ ಅದರಲ್ಲಿ ನನಗೆ ಖುಷಿಯೂ ಇದೆ ಹೆಮ್ಮೆಯೂ ಇದೆ. ಈ ಸಿನೆಮಾ ಒಪ್ಪಿಕೊಳ್ಳುವ ಮುಂಚೆ ಏಳು ಸಿನಿಮಾ ಓದಿದ್ದೆ. ಆದರೆ ಧ್ವನಿ ಸಿನೆಮಾದ ಮೊದಲನೇ ರೀಡಿಂಗ್ ಅಲ್ಲೇ ಒಪ್ಪಿಕೊಂಡೆ ತುಂಬಾನೇ ಖುಷಿ ಇದೆ ಸಿನೆಮಾ ಭಾಗವಾಗಿದ್ದಕ್ಕೆ.

 

->>ಕೊನೆಯದಾಗಿ ನಮ್ಮ ಕನ್ನಡಿಗರಿಗೆ ಏನ್ ಹೇಳಿತೀರಾ ಅಣ್ಣ ?

ಒಂದು ಒಳ್ಳೆಯ ಸಿನೆಮಾ ಕೊಟ್ಟಿದಿವಿ. ನೋಡಿ ಹರಸಿ. ಇಷ್ಟು ವರ್ಷದ ಪ್ರೀತಿಗೆ ಧನ್ಯವಾದಗಳು

Leave a Comment