'ಇರುವೆ 'ಕಂಡ JUPITER

Posted by Pramod 25/09/2016 11 Comment(s)

ಇರುವೆ ಕಂಡ JUPITER

 

ತುಂಬಾ ಅಪರೂಪಕ್ಕೆ ಮೊನ್ನೆ ಸ್ನೇಹಿತೆಯ ಜೊತೆ ನಾಟಕವೊಂದನ್ನು ನೋಡಲು ಹೋದೆ.ಆ ನಾಟಕದ ಹೆಸರು ‘JUPITER’ ಎಂದಿತ್ತು (ಯಡವಟ್ಟಿನ ಭೂಮಿ ಮೇಲಿನ ಜೀವನ ಬೇಡವೆಂದೆನಿಸಿತ್ತು; ಹಾಗಾಗಿ ಹೋದೆ). ಸೌರಮಾನದ JUPITER ಅನ್ನು ಎದುರು ನೋಡುತ್ತಿದ್ದ ನನಗೆ ಅಲ್ಲಿ ನೋಡಸಿಕ್ಕಿದ್ದು ಬೇರೆ. ಹೌದು... JUPITER ಅನ್ನೋದು ಇಲ್ಲೊಂದು ರೇಸ್ ಕುದುರೆ.

ಅದು ಪ್ರವರ ಆರ್ಟ್ ಸ್ಟೂಡಿಯೋ ತಂಡ ಪ್ರಸ್ತುತ ಪಡಿಸುತ್ತಿದ್ದ ಪ್ರಯೋಗಾತ್ಮಕ ‘ಪತ್ತೇದಾರಿ’ ನಾಟಕ.ಇದು Sir Arthur Conan Doyle ವಿರಚಿತ SHERLOCK HOLMES ಸರಣಿಯ ಒಂದು ಕಥೆ. ಈ ಕಥೆಯನ್ನು ಕನ್ನಡಕ್ಕೆ ಪ್ರಸಿದ್ಧ ರಂಗಕರ್ಮಿಗಳಾದ S.V.KrishnaSharma ರವರು ಅನುವಾದಿಸಿರುತ್ತಾರೆ

 

ರೇಸ್ ಪ್ರಿಯರಿಗೆಲ್ಲ JUPITER ಅದೃಷ್ಟದ ಕುದುರೆ. ಒಂದು ರಾತ್ರಿ ಆ ಕುದುರೆ ಲಾಯದಿಂದ ನಿಗೂಢವಾಗಿ ಕಾಣೆಯಾಗುತ್ತದೆ. ಅದೇ ರಾತ್ರಿ ಆ ಕುದುರೆಯ ತರಬೇತುದಾರ Bhopatlal ಅನ ಸಂಶಯಾಸ್ಪದ ಸಾವು ಸೇರಿಕೊಂಡು ಎಲ್ಲರನ್ನು ಕಂಗೆಡಿಸುತ್ತದೆ. ಆ ಕೇಸಿನ ತನಿಖಾಧಿಕಾರಿ ಇನ್ಸ್ಪೆಕ್ಟರ್ ರ ಇನ್ವೆಸ್ಟಿಗೇಷನ್ ಕುರಿತಾಗಿ ಕುದುರೆ ಮಾಲಿಕ PratapJain ಗೆ ನಂಬಿಕೆ ಬರೋಲ್ಲ. Derby ರೇಸಿನಲ್ಲಿ ಭಾಗವಹಿಸುವ ಸಲುವಾಗಿ, ಕಳೆದುಹೋದ ಕುದುರೆಯನ್ನುಹುಡುಕುವ ಬಗೆಗಿನ ಸಹಾಯಕ್ಕಾಗಿ ಪ್ರತಾಪ್ Sherlock( ಶರಲೇಖ – ಕನ್ನಡ ಅವತರಣಿಕೆ) ನ ಮೊರೆ ಹೋಗುತ್ತಾನೆ.

 

 

ಶರಲೇಖ ಹಾಗು ಆತನ ಸ್ನೇಹಿತ Dr.Watson(ವಾತ್ಸಾಯನ – ಕನ್ನಡ ಅವತರಣಿಕೆ – By ದಿ By Vaatsayana ಅಂದರೆ ನಮಗೆ ಬೇರೆ ಯಾರೋ ನೆನಪಾಗ್ತಾರಲ್ಲಾ!!??) ಇಬ್ಬರೂ ಭೋಪಟ್ ಲಾಲ್ ಹಾಗು ಕುದುರೆ ಕಳ್ಳತನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಲವರ ವಿಚಾರಣೆ ನಡೆಸುವ ಮೂಲಕ ಕಲೆಹಾಕಲಾರಂಭಿಸುತ್ತಾರೆ. ಈ ಸಂಧರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ತನಿಖೆಯ ಹಂತದಲ್ಲಿ  ಇನ್ಸ್ಪೆಕ್ಟರ್ ಗೂ ಹಾಗು ಶರಲೇಖರ ನಡುವೆ ಕೇಸ್ ಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿದ್ದುದರಿಂದ ಮಾತಿನ ಚಕಮಕಿಗಳು. ಶರಲೇಖನ ಚಾಣಾಕ್ಷತನದ ಮುಂದೆ ಇನ್ಸ್ಪೆಕ್ಟರ್ ನ ತರ್ಕಕ್ಕೆ ಬೆಲೆ ಸಿಗುವುದಿಲ್ಲ. ಶರಲೇಖ ಹಂತ ಹಂತವಾಗಿ ಹಲವಾರು ಕುತೂಹಲ, ಕೌತುಕಗಳಿಗೆ ತೆರೆಯೆಳೆಯುತ್ತಾ ಗೊಂದಲದ ಗೂಡಾಗಿದ್ದ ಕೇಸ್  ಅನ್ನು ಎಳೆ ಎಳೆಯಾಗಿ ಬಿಡಿಸಿ ಕುದುರೆ ಕಳವು ಹಾಗೂ ತರಬೇತುದಾರನ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸುತ್ತಾನೆ.

 

 

 

ಈ ನಾಟಕದ ವಿನ್ಯಾಸ, ನಿರ್ದೇಶನ ಹಾಗು ರಂಗಸಜ್ಜಿಕೆಯನ್ನು HanuRamasanjeeva ಅವರು ಬಹಳಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಟಕದ ಅಂದವನ್ನು ಹೆಚ್ಚಿಸುವಂತ ರಂಗ ಪರಿಕರಗಳನ್ನು ಬಹಳ ನೈಜವಾಗಿ, ಸುಂದರವಾಗಿ Malatesh Badiger ಅವರು ಉಪಯೋಗಿಸಿರುತ್ತಾರೆ. ನನಗೆ ತುಂಬಾ ಇಷ್ಟವಾಗಿದ್ದು ನಾಟಕದ Lighting. ಒಂದು ಸಣ್ಣ Torch, SpotLight ಗಳನ್ನುಕೂಡ ತುಂಬಾ ಚೆನ್ನಾಗಿ ಸದುಪಯೋಗಿಸಿದ್ದಾರೆ Manju Narayan ಅವರು. ನಾಟಕಕ್ಕೆ ಬೇಕಾದ  ಕುತೂಹಲಕಾರಿ ಹಿನ್ನೆಲೆ ಸಂಗೀತವನ್ನು Akshay Bhonsle ಹಾಗು Arpith Bhonsle ಸಹೋದರರು ಒದಗಿಸಿದ್ದಾರೆ.

 

ತುಂಬಾ ಇಷ್ಟವಾದ Dr.ವಾತ್ಸಾಯನ್ ಪಾತ್ರಧಾರಿ ಹೆಸರು Abhishith Rao ಅಂತ ನಾಟಕದ ನಂತರ ಕೇಳಿ ತಿಳಿದುಕೊಂಡೆ. ಅವರು ನಾಟಕದ Narrator ಪಾತ್ರವನ್ನು ಕೂಡ ವಹಿಸಿದ್ದರು.ಉಳಿದಂತೆ ಶರಲೆಖನ ಪಾತ್ರಧಾರಿ Venkatesh Bharadwaj ಅವರ ಆಂಗಿಕ ಅಭಿನಯ, Inspector ಪಾತ್ರ ವಹಿಸಿದ್ದ Girish ಅಲಾಜೆ ಅವರ Dialogue Delivery ಚೆನ್ನಾಗಿತ್ತು. ಪ್ರತಾಪ್ ಜೈನ್ ನ ಪಾತ್ರದಲ್ಲಿ ಪ್ರಜ್ವಲ್ ಜಯರಾಜ್ ಮತ್ತು ಚಂಪಾ ಪಾತ್ರಧಾರಿ ಸ್ನೇಹ ಶಣೈಅವರು ಗಮನ ಸೆಳೆದರು.

ನಾನು ನೋಡಿದ ಈ ನಾಟಕದ ಎರಡನೆಯ ಪ್ರದರ್ಶನವಾಗಿತ್ತು ಎಂದರೆ ನಂಬಲು ಅಸಾಧ್ಯವೇ ಸರಿ. ಪ್ರತೀ frameಇನಲ್ಲು ಪರ್ಫೆಕ್ಷನ್ ಎಂದೆನಿಸಿತ್ತು.Scene change ಆಗೋವಾಗ ತೆಗೆದುಕೊಂಡ ಸಮಯ ಸ್ವಲ್ಪ ಜಾಸ್ತಿ ಇತ್ತು ಎನ್ನುವ ಒಂದೇ ಒಂದು ಅಳಲು. ಅದನ್ನು ಹೊರತುಪಡಿಸಿ, ಒಟ್ಟಾರೆ ಹಂತ ಹಂತದಲ್ಲೂ ಕುತೂಹಲ, ರೋಚಕತೆಯನ್ನೊಳಗೊಂಡ "ಜೂಪಿಟರ್" ನಾಟಕ ಪ್ರೇಕ್ಷಕರ ಗಮನ ಹಿಡಿದಿರಿಸುವಲ್ಲಿ ಸಂಫೂರ್ಣವಾಗಿ ಯಶಸ್ವಿಯಾಗಿತ್ತು. ನೆರೆದಿದ್ದ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಈ ನಾಟಕ ರಂಗಭೂಮಿಯ  ಯಶಸ್ವಿ ಪ್ರಯೋಗಗಳ ಸಾಲಿಗೆ ಸೇರುತ್ತದೆ.ಅವಕಾಶ ಸಿಕ್ಕಲ್ಲಿ ಈ ನಾಟಕ ನೋಡಲು miss ಮಾಡದಿರಿ.

 

ಇದು Iruve Suggestion,

ಪ್ರ.ಸಾ.ರಾ

Tags: Play

11 Comment(s)

Suhas Nagaraj:
25/09/2016, 08:54:05 AM
Reply

Nice article hope to see that soon.

Pramod:
25/09/2016, 11:23:24 AM

Thanks Suhas.. U can catch their next show happening at KH.Kalasoudha on Oct-15th 7.30pm

Hanu Ramasanjeeva:
25/09/2016, 07:39:15 PM

Hi Suhas,We have our show on 15th of October,2016 at KH Kalasoudha. Please do come and watch our play.

Vishwas Prabhakar:
25/09/2016, 09:38:48 AM
Reply

This kind of encouragement is the need of the hour. Otherwise theatre will be a thing of the past very soon. Well written.

Pramod:
25/09/2016, 11:26:40 AM

Prayatnagalige bele sigade iddagle, hosa prayatnagalu maayavagodu.Creativity nashisi hogodu. Pls continue the same supporting Kannadism.

Prajwal Jayaraj:
25/09/2016, 05:21:12 PM, www.bhitthichitra. com
Reply

ಪ್ರ.ಸಾ.ರಾ ಅವರೇ, ತಮ್ಮ ಫ್ರೋತ್ಸಹಕ್ಕೆ ಹೃದಯಫೂರ್ವಕ ಕೃತಙ್ಞತೆಗಳು... ತಮ್ಮಿಂದ ಮುಂದಿನ ದಿನಗಳಲ್ಲಿ ಕನ್ನಡದ ಮಹತ್ವ ಹೆಚ್ಚಿಸುವಂತ ಇನ್ನಷ್ಟು ಪ್ರಯೋಗಾತ್ಮಕ ಕಾರ್ಯಗಳು ಮುಂದುವರಿಯಲಿ... ಕನ್ನಡ ಬಳಸಿ.. ಕನ್ನಡ ಬೆಳಸಿ..‌ ಕನ್ನಡ ಉಳಿಸಿ..ಧನ್ಯವಾದಗಳೂಂದಿಗೆ... -ಜೇ (Jay)

pramod:
25/09/2016, 10:25:28 PM

Dhanyosmi..

Prajwal Jayaraj:
25/09/2016, 05:21:13 PM, www.bhitthichitra. com
Reply

ಪ್ರ.ಸಾ.ರಾ ಅವರೇ, ತಮ್ಮ ಫ್ರೋತ್ಸಹಕ್ಕೆ ಹೃದಯಫೂರ್ವಕ ಕೃತಙ್ಞತೆಗಳು... ತಮ್ಮಿಂದ ಮುಂದಿನ ದಿನಗಳಲ್ಲಿ ಕನ್ನಡದ ಮಹತ್ವ ಹೆಚ್ಚಿಸುವಂತ ಇನ್ನಷ್ಟು ಪ್ರಯೋಗಾತ್ಮಕ ಕಾರ್ಯಗಳು ಮುಂದುವರಿಯಲಿ... ಕನ್ನಡ ಬಳಸಿ.. ಕನ್ನಡ ಬೆಳಸಿ..‌ ಕನ್ನಡ ಉಳಿಸಿ..ಧನ್ಯವಾದಗಳೂಂದಿಗೆ... -ಜೇ (Jay)

Hanu Ramasanjeeva:
25/09/2016, 07:26:10 PM, www.pravaraartstudio.in
Reply

ಪ್ರವರ ಆರ್ಟ್ ಸ್ಟುಡಿಯೋ ತಂಡಕ್ಕೆ ಮತ್ತು ಕನ್ನಡ ರಂಗಭೂಮಿಗೆ ನಿಮ್ಮ ಸಹಕಾರ ಹೀಗೆ ಸದಾಕಾಲ ಇರಲಿ.ಧನ್ಯವಾದಗಳು ಪ್ರಮೋದ್.

pramod:
25/09/2016, 10:25:59 PM

Dhanyavadagalu :-)

Vrushal Nayak:
25/09/2016, 07:55:30 PM
Reply

Very nice articulation, Artists are motivated when they see such posts.. All the best for the forthcoming shows 'jupiter'. Keep up the good work ಪ್ರ.ಸಾ.ರಾ!.

pramod:
25/09/2016, 10:26:40 PM

Thank you vrushal :-)

Vibha Gururaj:
25/09/2016, 09:23:26 PM
Reply

Thank you so much for your encouragement :) kindly support us in the same manner

pramod:
25/09/2016, 10:27:17 PM

Dhanyavadagalu vibha avare :-)

sneha shenoy:
26/09/2016, 09:17:47 AM
Reply

Thanks a lot Pramod for taking time an writing such a well articulated review on our show.Hope your support remains the same in all our future endeavors.

pramod:
27/09/2016, 12:28:42 AM

Dhanyavadagalu Sneha :-)

Prathima GP:
26/09/2016, 02:20:58 PM
Reply

Thank you so much for supporting us:-)

pramod:
27/09/2016, 12:29:10 AM

I'm humbled

Vaishnavi:
26/09/2016, 09:03:11 PM
Reply

Very well written.. Thanks for the wonderful support...

pramod:
27/09/2016, 12:29:50 AM

Dhanyavadagalu :-)

Sachin gowda:
26/09/2016, 10:06:07 PM
Reply

The happiness you get when someone review our efforts is priceless , thanks a lot for this Pramod Saligrama Ramakrishna , for you review on our play . :)

pramod:
27/09/2016, 12:30:27 AM

Thank you sachin :-)

Leave a Comment