Stars of Back Stage Series -2 : Sathya Prakash: ರಾಮಾ ರಾಮಾ ಅನ್ನುತ್ತಿರುವವರ ಸತ್ಯ ದರ್ಶನ:

Posted by Pramod 16/10/2016 4 Comment(s)

                  Stars of Back Stage Series -2 :  Sathya Prakash

                     

                          ರಾಮಾ ರಾಮಾ ಅನ್ನುತ್ತಿರುವವರ ಸತ್ಯ ದರ್ಶನ:

 

ಸಚಿನ್ ತೆಂಡೂಲ್ಕರ್ ಒಂದು ಕಡೆ ಈ ಮಾತನ್ನು ಹೇಳ್ತಾರೆ, ‘We Appreciate the showroom, while we fail to notice the warehouse behind’ ಅಂತ . ಹೌದು ರೀ, ನಿಮಗೆ ಹಿಡಿಸಿದ ಕಲೆ, ಸಾಹಿತ್ಯ, ಸಂಗೀತ ಹಾಗೂ ಯಾವುದೇ ವಿಚಾರದಲ್ಲಿ ನಿಮಗೆ ತಿಳಿಯದೆ,  ಅರಿವಿಗೆ ಬಾರದೆಯೇ ಅದಕ್ಕಾಗಿ ದುಡಿದ ಎಷ್ಟೋ ಜನರು ಇರುತ್ತಾರೆ.

 

 

 

ಇರುವೆ ತಂಡದ ಈ ಪುಟ್ಟ ಪ್ರಯತ್ನ ಯಾಕಪ್ಪ ಅಂದ್ರೆ ನಮ್ಮ ನಡುವೆಯೇ ಇದ್ದು ಗೊತ್ತಿದ್ದೂ ಗೊತ್ತಿಲ್ಲದವರ ಹಾಗೆ ಇರುವಂತಹ ತೆರೆ ಮರೆಯಲ್ಲಿ ಹುದುಗಿಸಿಟ್ಟ ಪ್ರತಿಭೆಯನು ಹೊರತೆಗೆಯುವುದು. ಮೊನ್ನೆ facebook browse ಮಾಡೋವಾಗ ‘ರಾಮ ರಾಮ ರೇ’ ಸಿನಿಮಾದ trailer ಲಿಂಕ್ ಒಂದು ಕಾಣಸಿಕ್ಕಿತು. ಕ್ಲಿಕ್ಕಿಸಿ ನೋಡಿದರೆ ಯಾವುದೋ ಹೊಸ ಅನುಭವ. ಖುಷಿ ಆಯ್ತು ಮತ್ತೊಮ್ಮೆ ನೋಡಿದೆ. ನಂತರ ಈ ಸಿನಿಮಾದ ಬೇರೆ ವೀಡಿಯೊ ಮೇಲೂ ಒಮ್ಮೆ ಕಣ್ಣು ಹಾಯಿಸಿದೆ. ಅಲ್ಲೊಂದು ಟಿಪ್ಪಣಿ ಇತ್ತು.

 

12000Kms of Travel for Location Search

3Yrs of Hardwork

80% of the story on ROAD

A New Genre movie  ಅಂತೆಲ್ಲಾ….

 

ಒಹ್ ಬ್ಲಾಗ್ನಲ್ಲಿ ಬರೆಯೋಕೆ ಹೊಸ ಕಥೆ ಸಿಗಬಹುದು ಅನ್ನೋ ಖುಷಿಲಿ friends ಮುಖೇನ ಈ ಸಿನಿಮಾ ನಿರ್ದೇಶಕರ ಫೋನ್ ನಂಬರ್ರು ,  ವಿಳಾಸ ಸಂಪಾದಿಸಿಕೊಂಡು ಇವರನ್ನ ಭೇಟಿ ಆಗಲು ಹೋದೆ. ಅವರ ಹೆಸರು ‘ಸತ್ಯ ಪ್ರಕಾಶ್’ ಅಂತ. Whatsapp, Facebook use ಮಾಡದ ಇವರು ಸರಳಜೀವಿ. ನಾನವರನ್ನು ಕಾಣಲು’ ಹೋದಾಗ ನನಗೆ ಅಲ್ಲೊಂದು ಅಚ್ಚರಿಯೇ ಕಾದಿತ್ತು. ‘Weekend with Ramesh’ ಪ್ರೋಗ್ರಾಮ್ನಲ್ಲಿ ಸಾಧಕರನ್ನ ನೋಡಿದ್ದ ನನಗೆ ಇವರ ಮಾತು, ಕಥೆ ಕೇಳಿ ಮುಂದೊಂದು ದಿನ ಆ ಖುರ್ಚಿಯಲ್ಲಿ ಕೂರಬಹುದಾದ ಸಾಧಕರನ್ನ ಭೇಟಿಯಾದಷ್ಟೇ ಖುಷಿ ಆಯ್ತು . ಆ ನನ್ನ ಖುಷಿ ಮತ್ತು ಅವರ ಸಾಧನೆಯನ್ನು ಬರೀ ಬ್ಲಾಗಿಗಾಗಿ ಸೀಮಿತವಾಗಿಸದೆ, ಇರುವೆಯ ಸ್ನೇಹಿತರಿಗಾಗಿ ಇಲ್ಲಿ ಪುಟ್ಟದಾಗಿ ನಿಮಗಿದೋ ತಂದಿದ್ದೇನೆ.

 

Sathya Prakash - ramaramare

 

 

ಇವರ ಕೆಲಸಗಳು:

Short Films – ಮಂಪರು, SUM, Jayanagar 4th Block

Assistant Director – ನಮ್ ಯಜಮಾನ್ರು

Screenplay – ಭಾಗ್ಯರಾಜ್, ಕೆಳದಿ ಶಿವಪ್ಪನಾಯಕ(Stalled), ಮದುವೆ impossible, happy new year

Dialogues – ಕಂಸಾಳೆ-ಕೈಸಾಲೆ, ಎಂದೆಂದಿಗೂ, ಊರ್ವಿ

Story - happy new year

DIrection – ರಾಮಾ ರಾಮಾ ರೇ

 

 

 

ನಿಮ್ಮ ಸಿನಿಮಾ ಪಯಣ??

 

ಹುಟ್ಟಿದ್ದು ಚಿಕ್ಕಮಗಳೂರಿನ ಕಡೂರಿನಲ್ಲಿ. ತಂದೆಯವರ ಕಾಫಿ ಪುಡಿ ಬಿಸಿನೆಸ್ ಚಿಕ್ಕಮಗಳೂರಿಗೇ ವರ್ಲ್ಡ್ ಫೇಮಸ್ಸು. ಚಿಕ್ಕಂದಿನಿಂದಲೂ ನನಗೋ ಕ್ರಿಕೆಟ್ ಹುಚ್ಚು. ನನ್ನ ವಿಪರೀತ ಕ್ರಿಕೆಟ್ನಿಂದಾಗಿ ಮನೆಯವರು ಬೇಸತ್ತು ಹಾಸನದಲ್ಲಿ ಓದಿಸಿದರು. ನಾನವಾಗ ಆರನೆಯ class ಓದ್ತಿದ್ದೆ, ನಮ್ಮ ಶಾಲೇಲಿ ಪ್ರತೀ ಗುರುವಾರ ನಾಟಕ ಆಡುಸ್ತಿದ್ರು. ೨೦ – ೨೫ ನಿಮಿಷಗಳ ಆ ನಾಟಕಕ್ಕೆ ನಾನೇ ಸೂತ್ರಧಾರ. ಪಂಚತಂತ್ರದ್ದೋ, ಗಾಂಪರ ಗುಂಪೋ ಕಥೆಗಳನ್ನ ತಿರುಚಿ ಬರೆದು ಬೇರೆಯವರ ಕೈಲಿ ಮಾಡಿಸುತ್ತಿದ್ದೆ. ದಿನಾ ರಾತ್ರಿ ಕಥೆ ಹೇಳುತ್ತಿದ್ದ ನನ್ನ ತಾತ ನನ್ನ ನಾಟಕಗಳನ್ನ ಉತ್ತೇಜಿಸುತ್ತಿದ್ದರು. ಪುನಃ high school ಹೊತ್ತಿಗೆ ಕಡೂರಿಗೇ ಬಂದಿದ್ದಾಯ್ತು. ೯ನೇಯ ಕ್ಲಾಸಿನಲ್ಲಿ ಆಕಾಶವಾಣಿಯಲ್ಲಿ ರೇಡಿಯೋ ನಾಟಕ program ನೀಡಿದ್ದುಂಟು. ಪದವಿ ಪೂರ್ವ ಶಿಕ್ಷಣಕ್ಕಾಗಿ ಬೆಂಗಳೂರಿನ S.J.R ಕಾಲೇಜ್ ಸೇರಿ PCMB ಆಯ್ಕೆ ಮಾಡಿಕೊಂಡೆ( ಆಯ್ಕೆ ಮಾಡಿದ್ದು, ಸ್ನೇಹಿತರು ಕೂಡ ಅದನ್ನೇ ತೆಗೆದುಕೊಂಡಿದ್ದಾರೆ ಅನ್ನೋಕೊಸ್ಕರ ಅಷ್ಟೇ). ಕನ್ನಡ ಮಾಧ್ಯಮದಲ್ಲಿ ಓದಿ ಬಂದಿದ್ದ ನನಗೆ ಒಮ್ಮೆಲೇ ನಗರದ ಟಸ್ಸು-ಪುಸ್ಸು ಆಂಗ್ಲ ಭಾಷೆ ಕಷ್ಟ ಎನಿಸಿತು. ಕ್ರಿಕೆಟ್ ಗೀಳಿದ್ದ ನನಗೆ ಕಂಡ ಕಂಡ ಕಡೆಯೆಲ್ಲ , ಟೈಮ್ ಸಿಕ್ಕಾಗೆಲ್ಲ, ಸಿಗದೇ ಇದ್ದಾಗೆಲ್ಲ ಟೈಮ್ ಮಾಡಿಕೊಂಡು ಆಡಿದ್ದುಂಟು. ಪಾಠ ಮಿಸ್ ಮಾಡ್ಕೊಂಡ್ರು, ಪರೀಕ್ಷೆ ಬರೆಯದೇ ಹೋದರು ಕ್ರಿಕೆಟ್ನ ಬಿಡ್ತಿರ್ಲ್ಲಿಲ್ಲ. Roger Binny cricket ಕ್ಲಬ್ನಲ್ಲಿ ಪಳಗಿದೆ. ಸ್ಟೇಟ್ ಲೆವೆಲ್ ರಣಜಿ ಆಡುವ ಹೊತ್ತಿಗೆ ಆರೋಗ್ಯ ವ್ಯತ್ಯಾಸ ಆಗಿ ಅವಕಾಶವಂಚಿತನಾದೆ. ಸರಿ… ಊರಿಗೆ ವಾಪಸ್ಸು ಬಂದು ತಂದೆಯ ಕಾಫಿ ಬಿಸಿನೆಸ್ ಒಂದು ವರ್ಷಗಳ ಕಾಲ ನೋಡಿಕೊಂಡಿದ್ದೆ. ಮನೆಯವರ ಒತ್ತಾಯದ ಮೇರೆಗೆ ಶಿವಮೊಗ್ಗದಲ್ಲಿ Diploma in CS ಮಾಡೋ ಹೊತ್ತಿಗೆ, ನನ್ನ ಮಿಮಿಕ್ರಿ ಮತ್ತೆ ನಟನ ಸಾಮರ್ಥ್ಯವನ್ನ ಅರಿತಿದ್ದ ಸ್ನೇಹಿತರು ಸಿನಿಮಾ ದಿಕ್ಕಿನ ಕಡೆ ವಾಲು ಎಂದರು.

ಸರಿ ಬೆಂಗಳೂರಿಗೆ ಬಂದೆ. IIHT ನಲ್ಲಿ Networking course ಒಂದನ್ನು ಮಾಡುತ್ತಾ ಮಾಡುತ್ತಾ ಚಿತ್ರರಂಗದಲ್ಲಿ ಎಲ್ಲಾದರೂ chance ಗಿಟ್ಟುತ್ತಾ ಅಂತ ಹವಣಿಸುತ್ತಿದ್ದೆ. ಆ ಸಮಯದಲ್ಲಿ ಸಿಕ್ಕವರೇ Director. S.Mahendar. ಅವರ computer ಸಿಸ್ಟಮ್ಗಳನ್ನ, networking ಓದಿಕೊಂಡಿದ್ದ ನಾನು  ರಿಪೇರಿ ಮಾಡುತ್ತಿದೆ. ನಂತರದಲ್ಲಿ V.Manohar ಸರ್ ಹತ್ತಿರ ಕೆಲಸಕ್ಕೆ ಸೇರಿಕೊಂಡೆ. ಅವರ ಟ್ಯೂನಿಗೆಲ್ಲ Dummy lyrics ಬರೆಯುತ್ತಿದೆ (Dummy lyrics ಅಂದರೆ actual ಹಾಡು ರೆಡಿ ಆಗೋಮುಂಚೆ ಟ್ಯೂನ್ ಅರ್ಥ ಮಾಡಿಕೊಳ್ಳಲು, ಮಾಡಿಸಲು ಬರೆಯುವ sample lyrics). ಅವರ ಹತ್ತಿರ ತುಂಬಾ ಕಲಿತೆ. ನಿರ್ದೇಶನದಲ್ಲಿ ಆಸಕ್ತಿಯಿದ್ದ ನನಗೆ ಕಲೆಯಲು ಅವಕಾಶ ಆಗತ್ತೆ ಅಂತ T.S.ನಾಗಾಭರಣ ಸರ್ ಹತ್ತಿರ ಸೇರಿಕೊಂಡೆ. ಶಾರ್ಟ್ films ತೆಗೆದಿದ್ದು, Assistant Director ಆಗಿ  ಕೆಲಸ ಕಲೆತಿದ್ದು ಅವರಿಂದಲೇ. ಸಿನಿಮಾ ಅಂದರೆ ಅದೊಂದು ಶ್ರದ್ಧೆ, ಭಯ, ಪವಿತ್ರತೆ ಹಾಗೆ ಒಂದು powerful dimension ಅಂತ  ತೋರಿಸಿಕೊಟ್ಟ ಗುರುಗಳು. ನಾಗಾಭರಣ sirನ ನನ್ನ Godfather ಅಂದರೆ ತಪ್ಪಾಗಲಾರದು.

 

‘ಜಯನಗರ 4th Block’ short film  ಮಾಡೋವಾಗ ಏನಿತ್ತು ನಿಮ್ಮ ಕಸರತ್ತು?

 

 

ಅತೀ ಹೆಚ್ಚು ಯೂಟ್ಯೂಬ್ನಲ್ಲಿ ವೀಕ್ಷಿಸಿರುವ ಕನ್ನಡದ ShortFilm ‘ಜಯನಗರ 4th ಬ್ಲಾಕ್ ‘ (3,55,800 Views) .  ಚಿಕ್ಕವರಿಂದ – ಇಳಿವಯಸ್ಸಿನವರು Relate ಮಾಡಿಕೊಳ್ಳಬಹುದಾದ  ಹರಟೆ-ಕಟ್ಟೆಯ ಮಜಲುಗಳನ್ನ ತುಂಬಾ ವರ್ಷಗಳ ಕಾಲ ಗಮನಿಸಿ-ಅರ್ಥೈಸಿ ಈ ಕಿರುಚಿತ್ರ ತೆಗೆದಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ, “ ನಾನು ಕಡೂರಿನವ. ನನಗೆ ಜಯನಗರ 4th Block ಅಂಥ ಏರಿಯಾ ಬೆಂಗಳೂರಿನಲ್ಲಿ ಇದೆ ಅಂತಾನೆ ಗೊತ್ತಿರಲಿಲ್ಲ.ನಟ ಧನಂಜಯ ಅವರ ಸೃಜನಶೀಲತೆಯ ಫಲ ಇದು. ಅವರ ಕಥೆಗೆ ಸ್ಕ್ರೀನ್ ಪ್ಲೇಯ ಚೌಕಟ್ಟು ಕೊಟ್ಟಿದ್ದು ಮಾತ್ರ ನಾನು.

ಜನಶ್ರೀ ಚಾನೆಲ್ ನಡೆಸಿದ್ದ Shortfilm Competitionನಲ್ಲಿ ಎರಡನೇ ಪ್ರಶಸ್ತಿ ಪದೆದುಕೊಂಡ್ತು . ಮತ್ತೆ ಬೆಸ್ಟ್ Cinematography ಅವಾರ್ಡ್ ಕೂಡ ತಂದುಕೊಡ್ತು . Infact ರಾಮಾ ರಾಮಾ ರೇ ಚಿತ್ರದಲ್ಲಿ ನಟ ಧನಂಜಯ ಅವರೇ ನಟಿಸಬೇಕಿತ್ತು. ಆದರೆ ಅವರಿಗೆ Datesನ ಸಮಸ್ಯೆ ಇತ್ತು (ಅವಾಗ ಅವರು Boxer ಮತ್ತು ಜೆಸ್ಸಿ ಸಿನಿಮಾ ಮಾಡ್ತಿದ್ರು). ಮತ್ತೆ script ಕೇಳಿಕೊಂಡಿದ್ದ ಧನಂಜಯ್ ಹೇಳಿದ್ದು ‘ಈ ಸಿನೆಮಾವನ್ನು ಬೇರೆ ಯಾರಾದರು ಮಾಡಲಿ. ನಾನು ಮಾಡಿದರೆ ಇದೊಂದು Out & Out Commercial ಸಿನಿಮಾ ಅಂತಾನೆ ಜನ ಪರಿಗಣಿಸುತ್ತಾರೆ. ಈ ಕಥೆಯ Aesthetics ಉಳಿಸಿಕೊಳ್ಳಲು ಕಷ್ಟವಾಗಬಹುದು.

 

ರಾಮಾ ರಾಮಾ ರೇ ಚಿತ್ರದ ಬಗ್ಗೆ ಹೇಳಿ

 

ಈ ಸಿನಿಮಾದಲ್ಲಿ ಹೀರೋ ಹೀರೋಯಿನ್ ಅಂತ ಇಲ್ಲ. ನಾಲ್ಕು ಮುಖ್ಯ ಪಾತ್ರಗಳ ಸುತ್ತ ಸುತ್ತುವ Life ಅನ್ನೋ Journey. ಮನುಷ್ಯನ ಭಾವನೆಗಳಾದ ಭಯ, ಸಂತೋಷ, ಧಾವಂತ, ನೋವು, ಪ್ರೀತಿ ಇಲ್ಲಿ ಎಲ್ಲವೂ ಪಾತ್ರಗಳಾಗಿ ಮೂಡಿಬಂದಿದ್ದಾರೆ. Realityಗೆ ತುಂಬಾ ಹತ್ತಿರವಿದ್ದು ಎಲ್ಲರಿಗೂ ಕನೆಕ್ಟ್ ಆಗೋ ಸಿನಿಮಾ. ಹೊಸಬರ ಸಿನಿಮಾ ಆಗಿರೋದ್ರಿಂದ ಯಾರು producer ಮುಂದೆ ಬರದೆ ಇದ್ದಾಗ , ಸ್ನೇಹಿತರೆಲ್ಲ ಸೇರಿ ಕೂಡಿಟ್ಟ ಹಣದಿಂದ ಮಾಡಿದ ಒಂದು ಪ್ರಾಮಾಣಿಕ ಪ್ರಯತ್ನ. Makeup man ಇಂದ ಹಿಡಿದು production unitಅಲ್ಲಿ ಕೆಲಸ ಮಾಡಿರೋರು, Rig Operator, Driver ಪ್ರತಿಯೊಬ್ಬರೂ ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ.

 

 

Realityಗೆ ಹತ್ತಿರವಿದೆ ಅಂತ ಹೇಳಿದ್ರಿ.But Trailerನಲ್ಲಿ ಖೈದಿ ಒಬ್ಬ ತಪ್ಪಿಸ್ಕೊಂಡ್ ಒಡ್ತಿರ್ತಾನೆ. ಇದು ಮಿಂಚಿನ ಓಟ  ಥರ Jail Break ಸಿನೆಮಾನಾ??

 

ಖಂಡಿತಾ ಅಲ್ಲ. ಜೈಲ್ ಬ್ರೇಕ್ ಒಂದು ಅಧ್ಯಾಯ ಅಷ್ಟೇ. ಅದರ ನಂತರ ಆ ಖೈದಿ ಭೇಟಿ ಯಾಗೋ ಪಾತ್ರಗಳು ಅವನ ಸುತ್ತ ನಡಿಯೋ ಘಟನಾವಳಿಗಳು. ಬೀರುವ ಪರಿಣಾಮಗಳೇ ಈ ಸಿನಿಮಾ. ಸಿನಿಮಾ ನೋಡಿದ ನಂತರ ನೀವೇ ಹೇಳುತ್ತೀರಿ. ಇದು JailBreak ಅಲ್ಲ . ಇದೊಂದು HeartBreak ಸಿನಿಮಾ.

 

Trailer ತುಂಬಾ landscape location ಗಳಿದೆ, Wide Shot ಗಳನ್ನೇ ಬಳಸಿದ ಹಾಗಿದೆ.. ಯಾಕೆ?

 

ಕಥೆ ಆ ಥರ demand ಮಾಡ್ತಿತ್ತು. ಸಿನಿಮಾದ ಬಹುಪಾಲು ಶೇಖಡ ೮೦ ಜರ್ನಿ ಯಲ್ಲಿ ನಡೆಯೋದರಿಂದ ಈ ಥರದ್ದೇ ನಿರ್ಜನ ಲೊಕೇಶನ್ ಬೇಕು ಅನ್ನೋ ಕಲ್ಪನೆ ನನಗಿತ್ತು. ಅದಕ್ಕೆ ಸಾಥ್ ಕೊಟ್ಟವರು ನನ್ನ ಎಲ್ಲ ಗೆಳೆಯರು. ಸ್ವಾರಸ್ಯ ಎಂದರೆ location ಹುಡುಕೋಕೆ ಸ್ನೇಹಿತನ honda activa ಗಾಡಿಯಲ್ಲಿ ಕೋಲಾರಕ್ಕೆ ಹೋದ್ವಿ. ಅಲ್ಲಿ ಸಮಾಧಾನ ಆಗ್ಲಿಲ್ಲ. ಇಲ್ಲೇ ದಾವಣಗೆರೆಯಲ್ಲಿ ಈ ಥರ ಜಾಗವಿದೆ ಅಂತ ಯಾರೋ ಹೇಳುದ್ರು .’ ಅಲ್ಲಿಗ್ ಹೋದ್ವಿ.. ಹಿಡಿಸಲಿಲ್ಲ.. ಹೀಗೆ ಹುಡುಕ್ತಾ ಹುಡುಕ್ತಾ ಕರ್ನಾಟಕದಾದ್ಯಂತ ೧೨೦೦೦ km ಅಲೆದಿದ್ದೇವೆ. ಇನ್ನೇನ್ ಸಿಗೋದಿಲ್ವೇನೋ ಅಂತ ವಾಪಸ್ಸಗ್ಬೇಕಾದ್ರೆ ಮಲ್ಲಿಕಾರ್ಜುನ್ ಅನ್ನೋರ ಕೊನೆ ಮಾತಿನ ಮೇರೆಗೆ ಬಿಜಾಪುರದಿಂದ 40km ದೂರದಲ್ಲಿನ ಈ ಜಾಗ ಸಿಕ್ತು. ಇಲ್ಲಿ ಸುತ್ತ ಮುತ್ತ 10km ಒಂದು ಮನೆ, ಅಂಗಡಿ ಏನೂ ಇಲ್ಲ. ಕುಡಿಯೋ ನೀರನ್ನು ಸಹ ಬಿಜಾಪುರದಿಂದ ತರಸಬೇಕಿತ್ತು. ಇಷ್ಟೊಂದು ಖಾಲಿ ಇದ್ದ ಜಾಗಾನ ಜನರ ಮನಸಲ್ಲಿ Register ಆಗೋಕೆ ಹೆಚ್ಚಾಗಿ Wide-Angle Shot ಬಳಸಿದ್ದೇವೆ.

 

ಸಿನಿಮಾದ music ವಿಭಿನ್ನವಾಗಿದೆ. ಇದು ಕೂಡ ಕಥೆ demand ಮಾಡಿದ್ದ?

 

ಹೌದು. ಸಿನಿಮಾದಲ್ಲಿ ಇರುವ 4 ಹಾಡುಗಳು Situation based ಹಾಡುಗಳು. ಎಲ್ಲೂ ಪ್ರೇಕ್ಷಕರನ್ನ ಸ್ವಿಟ್ಜರ್ಲ್ಯಾಂಡ್ ಇಗೋ ಐರ್ಲೆಂಡ್ಗೋ ಕರೆದ್ಕೊಂಡ್ ಹೋಗೋಲ್ಲ . ನಮ್ಮ ಮಧ್ಯೆನೇ ಇದ್ದು ನಮ್ಮ ಜನರಿಗೆ ತಲಪುವಂತಹ ಕಥೆ ಜೊತೆಗಿನ ಹಾಡುಗಳು. 4 ಹಾಡಿನ ಭಾವವನ್ನ Folk, Jazz, Contemporary, Harikathe ರೂಪದಲ್ಲಿ ತರುವಲ್ಲಿ ಸಂಗೀತ ನಿರ್ದೇಶಕರಾದ ‘ವಾಸುಕಿ ವೈಭವ್’ ಕೊಡುಗೆ ಅಪಾರ. ತುಂಬಾ ತಲೆ ತಿಂತಿದ್ದೆ. ನಮ್ಮನೆಗ್ ಬಂದು ಯಾವ್ದಾದ್ರು ಟ್ಯೂನ್ ತೋರಿಸಿ ಒಪ್ಪಿಸಿ ಹೋಗ್ತಿದ್ದ್ರು. ಅವರು ಮನೆಗ್ reach ಆಗೋಷ್ಟ್ರಲ್ಲಿ ಅದು ನನಗೆ ಹಿಡಿಸದೆಯೇ ಫೋನಾಯಿಸುತ್ತಿದ್ದೆ.

ಸಿನೆಮಾದ background music ಕೂಡ ಚೆನ್ನಾಗಿ ಮೂಡಿ ಬಂದಿದೆ. Nobin Paul Bgm ನೀಡಿದ್ದಾರೆ.

 

Jukebox 

 

 

ಸಿನೆಮಾದ ಕಥೆ ಹೇಗೆ ಹುಡುಕಿದಿರಿ?

 

ನಾನು independent ಆಗಿ ಸಿನಿಮಾ ಮಾಡ್ಬೇಕು ಅಂತ decide ಮಾಡಿದಾಗ ನನ್ ಹತ್ರ ಒಂದು ಕಥೆ ಇತ್ತು . ಅದೇ storyನ ನಾಲ್ಕು different versions ಗಳಲ್ಲಿ ಬರೆದೆ. ನನ್ನ ಆಪ್ತ ವಲಯದಲ್ಲಿ ಅದನ್ನ ತೋರಿಸಿದೆ. ಇದ್ಯಾವುದು workout ಆಗೋಲ್ಲ ಅಂತ ಹೇಳುದ್ರು. ಈ scene ಆ languageಅಲ್ಲಿ ಈ ಸಿನೆಮಾದಲ್ಲಿದೆ ಅಂತೆಲ್ಲ ಹೇಳುದ್ರು. ಸಿನಿಮಾ ಸ್ವಂತದ್ದೇ ಆಗಬೇಕು ಅನ್ನೋ ಹಠ ನನ್ನದು. ಪುನಃ ಅಳಿಸಿ ಮತ್ತೆ ಬರೆದೆ.. ಯಾಕೋ ಸರಿ ಹೋಗಲಿಲ್ಲ. ಒಂದೂವರೆ ವರ್ಷಗಳೇ ಕಳೆದಿದ್ದವು ಆದರೂ ಸ್ವಂತದ್ದು ready ಆಗಿರಲಿಲ್ಲ.

ಹಬ್ಬಕೆ ಅಂತ ಕಡೂರಿಗೆ ಹೋಗಿದ್ದೆ. ಪುಸ್ತಕದ ಗೀಳಿದ್ದ ನಾನು ಎಷ್ಟೋ ಪುಸ್ತಕಗಳನ್ನು ಓದಿದ್ದೇನೆ. ಆದರೆ ಮಹಾಭಾರತ ಮಾತ್ರ ಓದಿರಲಿಲ್ಲ. ಓದಕ್ಕೆ ಅಂತ ಪುಸ್ತಕ ಹಿಡಿದುಕೊಂಡೆ. ದ್ರೋಣಾಚಾರ್ಯರು ಮತ್ತೆ ದ್ರುಥರಾಷ್ಟ್ರರ ನಡುವೆ ನಡೆಯೋ ಒಂದು ಸನ್ನಿವೇಶದಲ್ಲಿ ಸಾಯುವವನ ಜೀವನ ಹೇಗಿರತ್ತೆ ಅನ್ನೋ concept ಸಿಕ್ಕಿತ್ತು. ಅದನ್ನೇ Fine-Tune ಮಾಡಿ ಮಾಡಿ ಈ ಕಥೇನ ತಯಾರಿಸಿದ್ದೇನೆ. ಬೇರೆ ಸಿನೆಮಾದ ಛಾಯೆ ಇಲ್ಲದೆ ಇರೋ ಹಾಗೆ ನೋಡಿಕೊಂಡಿದ್ದೇನೆ.

 

Cinema ಬಗೆಗಿನ ಸ್ವಾರಸ್ಯಕರ ಸಂಗತಿಗಳುಏನಾದರೂ.....!!

 

ಕರ್ನಾಟಕ-ಮಹಾರಾಷ್ಟ್ರ borderನಲ್ಲಿ ಶೂಟ್ ಮಾಡ್ತಿದ್ವಿ. ಎರಡನೆ schedule ಶೂಟ್ ಮಾಡೋಕೆ ಅಲ್ಲೇ ಹೊಸ ಜಾಗಕ್ಕೆ ಹೋಗಿ ಬೀಡುಬಿಟ್ಟಿದ್ವಿ. ನಾವು ಸಿನಿಮಾ ಶೂಟ್ ಮಾಡ್ತಿದ್ದ ಜಾಗದಲ್ಲಿ ಡಕಾಯಿತರು ಬಂದಿದ್ದಾರೆ ಅಂತ ಮಾಹಿತಿ ಇತ್ತು. ನಾವು ಉಳಿದುಕೊಂಡಿದ್ದ ಜಾಗದಿಂದ ಊರು 2-3km ದೂರದಲ್ಲಿ ಇತ್ತು.ನಮ್ಮ ಸಿನಿಮಾದ ಹೀರೋ ‘ನಟರಾಜ್’ ಜೈಲಿನಿಂದ ತಪ್ಪಿಸಿಕೊಳ್ಳುವ ಪಾತ್ರ ಮಾಡುವ ಸಲುವಾಗಿ ಗಡ್ಡ-ಗಿಡ್ಡ ಬಿಟ್ಟು, weight ಇಳಿಸಿ ಸ್ವಲ್ಪ ಕಳ್ಳನ ಥರಾನೇ ಕಾಣಿಸುತ್ತಿದ್ರು. ಅದು ಯಾರು ಹಬ್ಬಿಸಿದರೋ ಗೊತ್ತಿಲ್ಲ. ಕ್ಯಾಮೆರಾ ಎಲ್ಲ set ಮಾಡ್ತಿರ್ಬೇಕಾದರೆ 40 ಜನರ ಗುಂಪೊಂದು ಬಂದು ನಾವೇ ಆ ಡಕಾಯಿತರು ಅಂತ ಕೊಡಲಿ , ಪಂಜು ಎಲ್ಲ ಹಿಡಿದುಕೊಂಡು ಬಂದಿದ್ರು. ಪೋಲಿಸರಿಗೆ ನಮ್ಮ ನಟರಾಜನನ್ನು ಹಿಡಿದುಕೊಟ್ರು. ಒಂದು ಘಂಟೆ cellನಲ್ಲಿ ಕೂಡಿಹಾಕಿದ್ರು. Immediate ಆಗಿ IG ಗೆಲ್ಲ call ಮಾಡಿ.. ಡ್ರೈವಿಂಗ್ license , passport , Permission letter ಎಲ್ಲ ತೋರಿಸಿದಮೇಲೆ ಅವರನ್ನು ರಿಲೀಸ್ ಮಾಡಿದ್ದು . ಇಷ್ಟಾದ ಮೇಲೂ ನಮ್ಮನ್ನ ನಂಬದ ಜನ ಇನ್ನೊಂದೂರಿಗೆ ಚಿತ್ರೀಕರಣಕ್ಕೆ ಹೋದಾಗಲೂ ನಮ್ಮನ್ನ ಹಿಂಬಾಲಿಸಿದ್ದು ನಗುವಿನ ಜೊತೆ ಭಯವನ್ನು ಉಂಟು ಮಾಡಿತ್ತು .

raamaramare

 

ಸಿನೆಮಾದಲ್ಲಿ ಬಳಸಿರುವ ಜೀಪಿಗೆ ಅದರದ್ದೇ ಆದ ಮಹತ್ವ ಇದೆ.ಬೆಂಗಳೂರಿನಿಂದಲೇ ಹಳೆಯ ಜೀಪೊಂದನ್ನು ಖರೀದಿಸಿ , alter ಮಾಡಿ ಬಿಜಾಪುರಕ್ಕೆ ತೆಗೆದುಕೊಂಡು ಹೋಗಬೇಕಾದ್ರೆ ಚಿತ್ರದುರ್ಗದಲ್ಲಿ ಕೈಕೊಟ್ಟಿತ್ತು . ಇನ್ನೆರಡು ದಿನದಲ್ಲಿ ಶೂಟಿಂಗ್ ಶುರುವಾಗಬೇಕಿತ್ತು .ಹೊಸದೊಂದು ಖರೀದಿಸಿ alter ಮಾಡಿಸೋ ಅಷ್ಟು ಟೈಮ್ ಇರ್ಲಿಲ್ಲ. ಮೆಕ್ಯಾನಿಕ್ ಹೇಳಿದ್ರು ಇದನ್ನ ರೆಪೇರಿ ಮಾಡುದ್ರು ಬಿಜಾಪುರದವರೆಗೂ ತೆಗೆದುಕೊಂಡು ಹೋಗೋದು ಕಷ್ಟ ಅಂತ . Temporary ಯಾಗಿ ಪಾಪ ರೆಡಿ ಮಾಡಿಕೊಟ್ಟಿದ್ದರು . ಜೀಪ್ On ಮಾಡಿದರೆ ಸಾಕು ಗುಯ್ಯೋನ್ ಅಂತ ಕಿವಿಗಡಚುವ ಸದ್ದು . ಹೇಗೋ ಕಷ್ಟ ಪಟ್ಟು ನಿಧಾನವಾಗಿ ಬಿಜಾಪುರದಿಂದ 40 ಮೈಲಿ ದೂರವಿದ್ದ ಸಣ್ಣ ಊರ ತಲುಪಿದ್ವಿ . ಶೂಟಿಂಗ್ ಹಿಂದಿನ ರಾತ್ರಿ ನಾವು ಉಳಿದಿದ್ದ ಊರಿನ ಮಕ್ಕಳು ಯಾರೋ ಜೀಪಿನ ಕೀ ಕದ್ದುಬಿಟ್ಟಿದ್ದರು. ಹುಡುಕಿಸಿ ಸಿಗದೇ ಇದ್ದಾಗ ರಾತ್ರೋ ರಾತ್ರಿ ಬಿಜಾಪುರಕ್ಕೆ ಬಂದು duplicate ಕೀ ಮಾಡುವವರನ್ನು ಕರೆದುಕೊಂಡು ಬಂದು ಹೊಸದೊಂದು ರೆಡಿ ಮಾಡ್ಸಿದ್ದಾಯ್ತು. ಒಂದಾ-ಎರಡಾ ಇನ್ನೊಂದ್ ಸಲ ನಿರ್ಜನ ಪ್ರದೇಶದಲ್ಲಿ ಶೂಟ್ ಮಾಡ್ತಿದ್ವಿ(10km ಸುತ್ತ ಮುತ್ತ ಮರ, ಗಿಡ, ಮನೆ ಏನೂ ಇಲ್ಲ). ಒಮ್ಮೆಲೇ ಜೋರಾಗಿ ಮಳೆ ಶುರುವಾಯಿತು. ಸಿನೆಮಾದ entire 35 ಜನ , ಇದ್ದ omni ಕಾರು ಮತ್ತು ಟಾರ್ಪಾಲ್ ಹೊದಿಸಿದ್ದ ಈ ಜೀಪಿನಡಿ 6 hours ಕಳೆದಿದ್ದೀವಿ.

 

 

ಚಿತ್ರ ಜಗತ್ತಿನಲ್ಲಿ ನಿಮ್ಮ Role Model ಯಾರು?

 

ನಾನು ಅತಿ ವಿರಳವಾಗಿ ಸಿನಿಮಾ ನೋಡುತ್ತೇನೆ. Role Model ಅಂತ ಯಾರು particular ಆಗಿ ಇಲ್ಲ. But Dr.ರಾಜಕುಮಾರ್ ಸರ್ ರವರ ಆಂಗಿಕ ಅಭಿನಯಕ್ಕೆ ಮಾರು ಹೋಗುತ್ತೇನೆ. ಹೆಣ್ಣಿನ ಅಂತರಾಳವನ್ನು ಕೂಲಂಕುಶವಾಗಿ ಅರಿತ ಪುಟ್ಟಣ ಕಣಗಾಲ್ ಇಷ್ಟವಾಗುತ್ತಾರೆ. ಸಣ್ಣ ಎಳೆಯನ್ನು ಹಿಡಿದು ಮನೋಗ್ನ್ಯವಾಗಿ ಅಭಿನಯಿಸುವ Charlie Chaplin ಬಹಳ ಅಚ್ಚುಮೆಚ್ಚು.

 

ನಿರ್ದೇಶಕರಾಗಲು ಹೊರಟ ಹೊಸ ಹುಡುಗರಿಗೆ ನಿಮ್ಮ suggestion....

 

ನೀವು ಹೆಚ್ಚು ಹೆಚ್ಚು ಸಿನೆಮಾಗಳನ್ನ ನೋಡಬೇಡಿ. ನೋಡಿದಷ್ಟು compare ಮಾಡಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವ ಸಾಧ್ಯತೆ ಅಥವಾ ಆ ಚಿತ್ರ ನಿರ್ದೇಶಕನ ನೆರಳೇ ನಿಮ್ಮ ಸಿನಿಮಾದಲ್ಲಿ ಕಾಣಸಿಗುತ್ತದೆ. ಬದಲಾಗಿ ಹೆಚ್ಚು ಹೆಚ್ಚು ಪುಸ್ತಕಗಳನ್ನ ಓದಿ. ಅಡಗಿರುವ Creative Thought process ಒಂದನ್ನ ಬದಿದೆಬ್ಬಿಸೋಕ್ಕೆ ಸಹಕಾರವಾಗುತ್ತೆ.

 

Interviewed by

-Pra.Sa.Ra.

Read Our Music Review on #RamaRamaRe Here:

http://iruve.in/iruve%20blog/Rama%20Rama%20Re%20Vasuki%20Vaibhav%20Kannada%20Music%20Review

4 Comment(s)

ಶಶಾಂಕ್ ಸಾಲಿಗ್ರಾಮ ರಾಮಕೃಷ್ಣ:
17/10/2016, 02:05:36 AM
Reply

ಇದುವೇ ಸತ್ಯದರ್ಶನ..!! Hats off to both.. The Movie team and ಪ್ರ. ಸಾ. ರಾ..!! Personal Favourite..!

M.k.mutt:
17/10/2016, 11:01:39 AM
Reply

ಸತ್ಯವಾದ ಮಾತು ಹೇಳಿದೀರಿ ಸತ್ಯ. ನಿಮ್ಮೊಳಗಿರೋ ನಿಯ್ಯತ್ತು ನಿಮ್ಮನ್ನ ಎತ್ತರಕ್ಕೆ ಕೊಂಡೊಯ್ಯಲಿ. ನಿಮ್ಮ ಸಾಹಸದಲ್ಲಿ ನಾನೂ ಭಾಗಿ ಆಗಿರೋದಿಕ್ಕೆ ಹೆಮ್ಮೆ ಪಡ್ತೀನಿ. ಶುಭವಾಗಲಿ.

Prashanth n:
18/10/2016, 12:45:59 PM
Reply

ನಿಮ್ಮ ಚೊಚ್ಚಲ ಮಗುವಿನ ನಗುವನ್ನು ಕೆಳ್ಳೋಳು, ನಾವೆಲ್ಲರೂ ಕಾತುರದಿಂದ ಕಾಯುತಿದೆವೆ... ನಿಮಗೆ ಮತ್ತು ನಿಮ್ಮ ಸಿನಿಮಾ ಕುಟುಂಬ ಪರಿವಾರ ದವರಿಗೂ ನಮೆಲ್ಲರ ಸ್ನೇಹದ ಹಾರೈಕೆ ನಿಮ್ಮೊಂದಿಗಿದೆ...

Bipin Ramanna:
21/10/2016, 04:26:53 PM
Reply

Tumba antarala vagittu.. Obba nirdeshaka istella kasta padbeka.. ond sala ella nirdeshakarigu dirga danda namaskara.. Istu kattu ond Cinema needtira andre adra bele arta aagutte.. Iruve team, hege hech hech directrs na interview madi,, thanks

Pra.Sa.Ra:
22/10/2016, 07:57:03 PM

Dhanyavadagalu Ramannanavare.. Ondu cinema , nirdeshakana baduku haagoo kanasu kooda.. ondu olle cinema tayaraagoke eradarinda mooru varshagala shrama hindirutte.. Eshto sala naavugalu hindoo mundoo nodade adaralli adu chennagilla, idu chenagilla anta theeke maadutteve.Khanditavaagi oduvavaru iruvavaregoo naavu innu hechhu directors'na antaraalada maatugalannu illi tarutteve.. Keep watching this space for more :-)

Leave a Comment