ತಿಥಿ ವಿಮರ್ಶೆ

Posted by Pramod 11/05/2016 8 Comment(s)

ತಿಥಿ ವಿಮರ್ಶೆ
Century Gowdru
 

ನಿರ್ದೆಶಕ : ರಾಮ್ ರೆಡ್ಡಿ

ತಾರಾಗಣ : ಚನ್ನೇಗೌಡ, ತಮ್ಮೇಗೌಡ , ಸಿಂಗ್ರೀಗೌಡ, ಅಭಿಷೇಕ್, ಪೂಜಾ

ಕಾಲಾವಧಿ : ೨ ಘಂಟೆ ೦೪ ನಿಮಿಷ

 

ಹಾಡು, ಫೈಟ್,  ತಾರಾಬಳಗ ಇಲ್ಲದ ಸಿನಿಮಾಗಳನ್ನ ನಾನ್ ಕಮರ್ಶಿಯಲ್ ಅಂತ Brand ಮಾಡಿ, Theatrical ರಿಲೀಸ್ ಕೊಡದೆಯೇ ಅವಾರ್ಡ್ಸು , ಸನ್ಮಾನಗಳಿಗೆ ಮಾತ್ರ ಸೀಮಿತಗೊಳಿಸಿರುತ್ತೇವೆ. ಮನರಂಜನಾತ್ಮಕ ಅಂಶಗಳು ಕಡಿಮೆ ಇರುತ್ತೆ, ಅವುಗಳು ಬರೀ ಬುದ್ಧಿಜೀವಿಗಳಿಗೆ ಮಾತ್ರ ಎಂಬ ಮನೋಭಾವ ಮೊದಲಿನಿಂದಲೂ ಇದ್ದುದ್ಡೆ.  ನೀವು ‘ತಿಥಿ’ ಸಿನಿಮಾ ನೋಡಿದ್ದೆ ಆದರೆ, ಈ ಮಾತುಗಳನ್ನು ಒಪ್ಪುವುದಿಲ್ಲ.

ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ೯ ಕ್ಕೂಹೆಚ್ಚು ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ೧೨+ ಪ್ರಶಸ್ತಿಗಳಿಗೆ ಭಾಜನರಾಗಿರುವ ಈ 'ತಿಥಿ' ಸಿನೆಮಾವು ಕಳೆದ ವಾರವಷ್ಟೇ ದೊಡ್ಡ ಪರದೆಯ ಮೇಲೆ Release ಆಗಿದೆ.

 

ಕಥಾ ಹಂದರ ಸರಳವಾಗಿದ್ದು, ಪ್ರೇಕ್ಷಕ ಪ್ರಭುಗಳನ್ನು ಸಿನೆಮಾದುದ್ದಕ್ಕೂ ನಗೆಗಡಲಿನಲ್ಲಿ ರಂಜಿಸುತ್ತದೆ. ನಾಲ್ಕು ತಲೆಮಾರಿನ ಮನೆಯಲ್ಲಿ ,ಹಿರಿಯಜ್ಜ ಸಾಯುತ್ತಾನೆ. ಸತ್ತ ದಿನದಿಂದ, ಹನ್ನೊಂದನೆಯ (ತಿಥಿ) ದಿನದವರೆಗಿನ ಮಗ, ಮೊಮ್ಮಗ, ಮರಿಮಗನ ಆಟೋಟವೇ ಈ ತಿಥಿ ಸಿನೆಮಾ.

ಮನೆಯ ಮುತ್ತಜ್ಜ ಚನ್ನವೀರಗೌಡರು ಅಕಾ ಸೆಂಚುರೀಗೌಡ(೧೦೧ ವರುಷ ಬದುಕಿದಾತ) ಓಪನಿಂಗ್ ಸೀನ್ ಕಾಮೆಡೀ ನಂತರ ಹಟಾತನೆ ತೀರಿಕೊಳ್ಳುತ್ತಾನೆ.
                                         Thithi procession
ಅವರ ಮಗನಾದ ಗಡ್ಡಪ್ಪನಿಗೆ, ಅರವತ್ತಕ್ಕೆ ಅರಳೊ ಮರಳೋ ಎಂಬಂತೆ ಲೌಕಿಕ ಪ್ರಪಂಚದಿಂದ ಹೊರಗುಳಿದು ತನ್ನ ಪಾಡಿಗೆ ಸೆಂಧಿ ಅಂಗಡಿಯ ದಾಸನಾಗಿ ಊರು ತುಂಬಾ ಸುತ್ತಾಡುತ್ತಿರುತ್ತಾನೆ.
                                         Gaddappa and Grandson

ಮೊಮ್ಮಗನಾದ ತಮ್ಮಣ್ಣಗೌಡರು ತುಂಬಾ ಪ್ರ್ಯಾಕ್ಟಿಕಲ್ ಮನುಷ್ಯ, ಪ್ರಾಪಂಚಿಕ ಭೋಗ ವಸ್ತುವಾದ , ಅಪ್ಪನಿಗೆ ಬೇಡವಾದ, ತಾತನ ಆಸ್ತಿ ತನಗೆ ಬರಬೇಕೆಂಬ ಮಹಾದ್ಬಯಕೆ ಅವನಿಗೆ. ಆ ಆಸೆಯನ್ನು ಪೂರೈಸಿಕೊಳ್ಳಲು ಹೆಣಗುವ ಅವನ ಆತುರತೆ,ಆಚಾತುರ್ಯಗಳು ಹೇಳತೀರದು. ಇನ್ನು ಮರಿಮಗ ಅಭಿ. ಹದಿಹರೆಯದ  ವಯಸ್ಸಿನ ಚೇಷ್ಟೆಗಳನ್ನು ಮಾಡುತ್ತಾ, ಕುರುಬರ ಹುಡುಗಿ ಹಿಂದೆ ಬೀಳುತ್ತಾನೆ. ಇವರುಗಳ ಹನ್ನೊಂದು ದಿನದ ದಿನಚರಿಯೇ ಇಲ್ಲಿ ತಿಥಿಯಾಗಿ ಹೊರಹೊಮ್ಮಿದೆ.
                                         
 

ಮಂಡ್ಯ ಜಿಲ್ಲೆಯ ನೊದೆಕೊಪ್ಪಲು ಗ್ರಾಮದಲ್ಲಿ ನಡೆಯುವ ಕಥೆಗೆ ಅದೇ ಊರಿನ ಗ್ರಾಮಸ್ಥರೇ ಸಿನೆಮಾದಲ್ಲಿ ನಟಿಸಿರುತ್ತಾರೆ. ಇವರ್ಯಾರೂ ಈ ಮುಂಚೆ ಕ್ಯಾಮರ ಮುಂದೆ ಕಾಣಿಸಿಕೊಂಡವರಲ್ಲ.  ಎಲ್ಲರಿಗೂ ಇದು Debut ಸಿನಿಮಾ. ಚಿತ್ರೀಕರಣದ ಅರಿವೇ ಇಲ್ಲದೆ ತುಂಬಾ ನ್ಯಾಚುರಲ್ ಆಗಿ ನಟಿಸಿದ್ದಾರೆ.

ಇನ್ನೂ ಸಣ್ಣ ಪುಟ್ಟ ಪಾತ್ರಧಾರಿಗಳಾಗಿ ಬರುವ ಗ್ರಾಮಸ್ಥರು, ಗುಳೆ ಹೋಗುವ ಉತ್ತರ ಕರ್ನಾಟಕದ ಕುರುಬರು. ಸಾಲ ಕೊಡುವ ವಾಚಾಳಿ ಹೆಂಗಸು, ತಿಥಿ ಮಾಡಿಸಲು ತಗಾದೆ ತೆಗೆಯುವ ಊರ ಹಿರಿಯ ಹೀಗೆ ಎಲ್ಲರೂ ಕೂಡ ಸಿನೆಮಾದ ಜೀವಾಳವಾಗುತ್ತಾರೆ. ಇವರ ಎಗ್ಗು ಸಿಗ್ಗುಗಳಿಲ್ಲದ ಒರಟು ಭಾಷೆ, ಕೆಲವೊಂದೆಡೆ ಸ್ಫಷ್ಟತೆ ಇಲ್ಲದೆ ಇರುವುದು ಕೂಡ ಈ ಸಿನೆಮಾಗೆ ಪ್ಲಸ್ ಪಾಯಂಟ್ ಆಗಿದೆ.ಡಬ್ಬಿಂಗ್ ಮಾಡಿಸದೆಯೇ,ನ್ಯಾಚುರಲ್ ವಾಯ್ಸ್ ಅನ್ನೇ ಉಪಯೋಗಿಸಿದ್ದಾರೋ ಏನೋ ಅನ್ನುವಂತಿದೆ.

 

 ಈರೆಗೌಡರು ತುಂಬಾ ಚೆನ್ನಾಗಿ ಕಥೆಯನ್ನು ಹೆಣೆದಿದ್ದಾರೆ.  ಚೊಚ್ಚಲ ಪ್ರಯತ್ನದಲ್ಲೇ ನಿರ್ದೇಶಕ ರಾಮ್ ರೆಡ್ಡಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಸಿನೆಮಾದ ಟೆಕ್ನಿಕ್ಯಾಲಿಟೀ ಬಗ್ಗೆ ತುಟಿಕ್ ಪಿಟಿಕ್ ಅನ್ನೋ ಹಾಗಿಲ್ಲ.

 

ಲೋಭ,ಮೋಹ,ಮದ,ಮಾತ್ಸರ್ಯ ತುಂಬಿದ ಮೂರು ತಲೆಮಾರಿನವರ ಜೀವನ ಶೈಲಿ ಇಲ್ಲಿ ವಿಡಂಬನಾತ್ಮಕ ಹಾಸ್ಯ ಹುಟ್ಟಿಹಾಕಿದೆ.ಇದು ನಮ್ಮ ನಿಮ್ಮೆಲ್ಲರ ಕಥೆ ಎನ್ನಿಸುವ ಮಟ್ಟಿಗೆ ಪರಿಣಾಮಕಾರಿಯಾಗಿದೆ.ಸಿನೆಮಾದ ಹೆಸರು ತಿಥಿ ಅಂದ ಮಾತ್ರಕ್ಕೆ ಇದು ಶೋಕಸಾಗರದಲ್ಲಿ ಮುಳುಗೆಳಿಸುವುದಿಲ್ಲ. ಬದಲಾಗಿ ನಗೆಗಡಲಿನಲ್ಲಿ ತೇಲಿಸುತ್ತಾ ನಮ್ಮನ್ನು ಸಾವಿನ ಮನೆಯ ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತೆ.

 

ನಾವು City ಜನ, ಹಳ್ಳಿಯಲ್ಲಿ ಬದುಕಲು ಇಚ್ಚ್ಚಿಸುತ್ತೇವೆ. ಆದರೆ ಅವರಿಗೂ ನಮಗೂ ಅಂತ ವ್ಯತ್ಯಾಸಗಳೇನಿಲ್ಲ - ಎಲ್ಲರೂ ಶುದ್ದರು , ಪರಿಶುದ್ಧರೂ ಆಗಿರುವುದಿಲ್ಲ. ನಮ್ಮ ಹಾಗೆ ಹಳ್ಳಿಗರು ಕಷ್ಟಪಡುತ್ತಾರೆ. ನಮ್ಮ ಹಾಗೆ ಅವರು - ಅವರದ್ದೇ ಆದ ಶೈಲಿಯಲ್ಲಿ ಸಂಭ್ರಮಿಸುತ್ತಾರೆ ಎಂಬುದನ್ನು ನಿರ್ದೇಶಕರು ಮನದಟ್ಟಾಗುವ ಹಾಗೆ ರೀಲ್ನಲ್ಲಿ ತೋರಿಸಿದ್ದಾರೆ. ಹಾಗೆ ತೋರಿಸುವಾಗ ಪ್ರತೀ ಫ್ರೇಮ್ನಲ್ಲೂ ಪ್ರೇಕ್ಷಕರ ಮುಖದಲ್ಲಿ ನಗು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ದುರ್ಬೀನು ಹಾಕಿಕೊಂಡು ಸಿನೆಮಾದಲ್ಲಿ ತಪ್ಪು ಹುಡುಕಲೇಬೇಕು ಎಂದಾದರೆ ಒಂದೋ ಎರಡೋ ಸಿಗಬಹುದೇನೋ ಅಷ್ಟೇ. ಹೊಸದಾಗಿ ಸಿನಿಮಾ ಮಾಡಲು ಹೊರಟವರಿಗೆ ಈ ಸಿನೆಮಾವನ್ನು ರೆಫರ್ ಮಾಡಲು ಹೇಳಬಹುದಾದಂತ ಪರ್ಫೆಕ್ಟ್ ಚಿತ್ರ. ಯಾವ ಕಾಲಘಟ್ಟದಲ್ಲೂ ನೋಡಬಹುದಾಗಿರುವ ಎವರ್‌ಗ್ರೀನ್ ಸಿನಿಮಾ. ಮನೆಯವರೆಲ್ಲರ ಜೊತೆ ಮಿಸ್ ಮಾಡದೆಯೇ ತಿಥಿ ಅಟೆಂಡ್ ಮಾಡಿ.

     - ಪ್ರ. ಸಾ. ರಾ.

 

Tags: Reviews

8 Comment(s)

ಸುಹಾಸ:
11/05/2016, 09:37:01 PM
Reply

ಚೆನ್ನಾಗ್ ಬರ್ದಿದ್ದೀಯೋ ಪ್ರ.ಸಾ.ರಾ.!

sandhya:
11/05/2016, 10:56:31 PM
Reply

Well said pramod!

Prateek:
11/05/2016, 11:23:58 PM
Reply

Well written bruv!

Prabhakar:
12/05/2016, 12:57:29 AM
Reply

Nice conclusion

Vinod:
12/05/2016, 10:54:04 AM
Reply

Good start pramod.

Mahesh:
12/05/2016, 11:53:12 PM
Reply

ಸಿನೆಮಾ ಹೇಗಿದಿಯೋ ಇನ್ನೂ ನೋಡಿಲ್ಲ, ಆದರೆ ಈ ವಿಮರ್ಶೆ ಓದಿದ ಮೇಲೆ ನೋಡಲೇಬೇಕು ಅನ್ನಿಸಿದ್ದಂತೂ ಸುಳ್ಳಲ್ಲ. ಸ್ವಚ್ಛ ಭಾಷೆ, ಸಿನೆಮಾ ನೋಡದವರಿಗೆ ಆಸಕ್ತಿ ಕೆರಳಿಸುವಂತಹ ಇಂತಹ ವಿಮರ್ಶೆ ಬರಿ ಈ ಬ್ಲಾಗಿಗಷ್ಟೇ ಸೀಮಿತವಾಗದೆ ಪತ್ರಿಕೆಗಳಲ್ಲಿ, ದೂರದರ್ಶನವೇ ಮೊದಲಾದ ಮಾಧ್ಯಮಗಳಿಗೂ ತಲುಪಲಿ ಅನ್ನುವುದು ನನ್ನ ಆಸೆ.All the best ಪ್ರಮೋದ.

Pramod(pra.sa.ra):
13/05/2016, 10:46:07 PM
Reply

Ellarigoo nanna Dhanyavadagalu.. Mundina dinagalalli, innu chennag bareyalu prayatnisuttene.

Sourabha:
27/05/2016, 01:06:01 AM
Reply

Tumba chennagi vimarshe madiddira.. Neat and clean bhashe..

Leave a Comment