ELECTION NOTICE: DELAYS POSSIBLE , FOR INSTANT DELIVERY/BULK ORDERS | Call +91 70227 22566
Do follow these crucial steps to get an ICU bed in Bengaluru.


Covid-19 ನಿಂದ ಬಳಲಿದ ಹಲವಾರು ರೋಗಿಗಳು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ICU bed ಗಳನ್ನು ಹುಡುಕುವಲ್ಲಿ ಹರಸಾಹಸ‌ ಪಟ್ಟಿದ್ದಾರೆ. ಇಂತಹ, ಸನ್ನಿವೇಶವು ನಿಮಗಾಗದಿರಲಿ ಎಂದು ಬಯಸುತ್ತೇವೆ.

 

ಬೆಂಗಳೂರು ನಗರದಲ್ಲಿ ICU bedಗಳನ್ನು ಹುಡುಕಲು ಹಾಗು ಕಾಯ್ದಿರಿಸಲು ಈ ಮಾರ್ಗಸೂಚಿಗಳನ್ನು ಅನುಸರಿಸಿ.‌


Step 1

* ನಿಮಗೆ ಆಸ್ಪತ್ರೆಯ ಅವಶ್ಯಕತೆ ‌ಇದೆ ಎಂದಾದರೆ, ಈಗಾಗಲೆ ನೀವು‌ covid test ಮಾಡಿಸಿದ್ದು, ನೀವು ಮನೆಯಲ್ಲಿ Isolate ಆಗಿದ್ದು, ನಿಮ್ಮ doctor ನಿಮಗೆ‌ ಆಸ್ಪತ್ರೆಯ ಸಹಯ ಅವಶ್ಯಕ‌ ಎಂದು ಸೂಚಿಸಿರುತ್ತಾರೆ.

*SMS ಮೂಲಕ ಬರುವ RT-CPR report ನಲ್ಲಿ SRF number ಇರುತ್ತದೆ. ಈ number ಬಹಳ ಮುಖ್ಯ ಅದಕ್ಕಾಗಿ SRF number save ಮಾಡಿಕೊಳ್ಳಿ.

* ನಿಮ್ಮ RT-CPR test positive ಬಂದಲ್ಲಿ ನಿಮಗೆ BU number annu reportನೊಂದಿಗೆ ಕಳುಹಿಸಲಾಗುತ್ತದೆ, ಇದೂ ಕೂಡ ನಿಮಗೆ SMS ಮೂಲಕ ಬರುತ್ತದೆ.

*ಒಂದೊಮ್ಮೆ BU number ಬರದ್ದಿದ್ದರೆ BBMP ಅವರ 1912 ಸಹಾಯವಾಣಿಗೆ ಕರೆ ಮಾಡಿ‌ ನಿಮ್ಮ SRF number ಮೂಲಕ‌ BU number ಅನ್ನು generate ಮಾಡಿ

*ಕೆಲವೊಮ್ಮೆ ನಿಮಗೆ ಎಲ್ಲಾ ತರಹದ symptoms ಕಂಡುಬಂದರೂ ಸಹಾ ನಿಮ್ಮ report negative ಬರಬಹುದು. ಇಂತಹ case ಗಳನ್ನು SARI (Severe Accute Respiratory Infection) case ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ SRF number ಮೂಲಕ ಮತ್ತೊಮ್ಮೆ ICU bed ಪಡೆಯುವ ಪ್ರಯತ್ನ ಮಾಡಬಹುದು.


Step-2


                     Positive Report ಉಳ್ಳ patients bed ಪಡೆಯುವ ವಿದಾನ


* ಇರುವುದರಲ್ಲಿ ಸೂಕ್ತವಾದ ಆಯ್ಕೆ ಎಂದರೆ, BBMP ಅವರ 1912, 108 ಅಥವಾ 14410 ಸಹಾಯವಾಣಿಗೆ ಕರೆ ಮಾಡುವುದು. ಖಾಸಗಿ ಆಸ್ಪತ್ರೆಗಳು BBMP quota ಅಡಿಯಲ್ಲಿ 50% bedಗಳನ್ನು ಮೀಸಲಿಡಲಾಗಿದೆ‌.

* ನಿಮ್ಮ RT-CPR test positive ಬಂದಲ್ಲಿ SRF number ಅಥವಾ BU number ಉಪಯೋಗಿಸಿ bed ಪಡೆಯಲು ನಮೂದಿಸಿರಿ

*ಗಮನವಿರಲಿ Covid caseಗಳ ಸಂಖ್ಯೆ, ನಮ್ಮಲಿರುವ bed ಸಂಖ್ಯೆಗಿಂತಲೂ ಹೆಚ್ಚಾಗಿರುವುದರಿಂದ, bed ಪಡೆಯವ ಪ್ರಕ್ರಿಯೆ ತಡವಾಗಬಹುದು.

*BBMP ಸಿಬ್ಬಂದಿಯು ಕೂಡ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು ಕೆಲುವೊಮ್ಮೆ ನಿಮ್ಮ ಅಹವಾಲನ್ನು ಮರೆಯಬಹುದು ಅಥವಾ miss ಆಗಬಹುದು ಹಾಗಾಗಿ ನಿಮ್ಮ ಕುಟುಂಬದ ಒಬ್ಬ ಸದಸ್ಯನಿಗೆ BBMP ಯವರಿಗೆ bed ಸಿಗುವ ತನಕ ಕರೆ ಮಾಡಿ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸೂಚಿಸಿರಿ.



step 3

 

Negative Report ಉಳ್ಳ patients bed ಪಡೆಯುವ ವಿದಾನ


*ಕೆಲವೊಮ್ಮೆ ನಿಮಗೆ ಎಲ್ಲಾ ತರಹದ symptoms ಕಂಡುಬಂದರೂ, ನಿಮ್ಮ report negative ಬರಬಹುದು. ಇಂತಹ caseಗಳನ್ನು SARI (Severe Accute Respiratory Infection) case ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮ ನೀವು bed ಪಡೆಯುವ ಪ್ರಕ್ರಿಯೆಯು ತಡವಾಗಬಹುದು.

*ಇಂತಹ ಸಂದರ್ಭಗಳಲ್ಲಿ BBMP ಅವರಿಗೆ ಕರೆ ಮಾಡಿ SARI case ಎಂದು ದಾಖಲಿಸಿ, ನಿಮ್ಮ SRF number ಸಹಾಯದಿಂದ bed ಪಡೆಯಲು ಪ್ರಯತ್ನಿಸಿ.

*ಆದಲ್ಲಿ ಮತ್ತೊಂದು test ಮಾಡಿಸಿ ಅಥವಾ test ಮಾಡಿಸಿದ lab ನಿಂದ report ಅನ್ನು ಪುನರ್ ಪರಿಶೀಲಿಸಿ.
ಗಮನವಿರಲಿ ಮತ್ತೊಮ್ಮೆ ಮಾಡಿಸಿದ test report ಬರಲು 2 ದಿನವಾಗಬುಹುದು.

*BBMP ಯವರು BU number ಕೇಳಿದಲ್ಲಿ ಅವರಿಗೆ SARS case ಎಂದು ವಿವರಿಸಿ, ಏಕೆಂದರೆ, BU number generate ಆಗುವುದು positive case ಗಳಿಗೆ ಮಾತ್ರ. ಹೀಗಿದ್ದರೂ ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ‌


Step -4


                                  ಇತರೆ ಪ್ರಯತ್ನಗಳನ್ನು ಸತತವಾಗಿ ಮಾಡಿರಿ


*ಕುಟುಂಬದ ಒರ್ವ ಸದಸ್ಯನಿಗೆ ಸತತವಾಗಿ ಖಾಸಗಿ ಆಸ್ಪತ್ರೆಗಳಿಗೆ ಕರೆ ಮಾಡಿ bed availability ಬಗ್ಗೆ ಮಹಿತಿ ಪಡೆಯಲು ತಿಳಿಸಿ.

*ಆಸ್ಪತ್ರೆಯ bedಗಳ ಮಾಹಿತಿ ಪಡೆಯಲು ಈ ಕೆಳಗಿನ websiteಗಳಿಗೆ ಭೇಟಿ ನೀಡಿ
Www.covidbengaluru.com
ಅಥವಾ
Www.http://bbmpgov.com/chbms/

*ಬಹಳಷ್ಟು ಸರ್ಕಾರಿ ಹಾಗು ಖಾಸಗಿ ಸಹಾಯವಾಣಿ ಸಂಖ್ಯೆಗಳು ಕಾರ್ಯನಿರ್ವಹಿಸುವುದಿಲ್ಲ, ಇಂತಹ ಸಂದರ್ಭಗಳಲ್ಲಿ ತಾಳ್ಮೆಯಿಂದ ಆಲೋಚಿಸಿ.

*ಸಾಮಾಜಿಕ ಮಾಧ್ಯಮ Instagram, Facebook, WhatsApp, Twitter‌ ಅಥವಾ ಸ್ವಯಂಸೇವಕರ ನೆರವು ಪಡೆಯಲು ಪ್ರಯತ್ನಿಸಿ.

*ನೆರವು ನೀಡುವ ಕೆಲವು Instagram handles ಹೀಗಿವೆ
@e_prajwal_manipal
@yuvaavolunteers
@monkey.inc
@yohansudheer


Positive patient ಮಹಿತಿಯನ್ನು ಈ ರೀತಿಯಲ್ಲಿ ಸಿದ್ಧ ಮಾಡಿಕೊಂಡು ನೆರವು ಬೇಕಾದಾಗ ಸಾಮಾಜಿಕ ಮಾಧ್ಯಮ Instagram, Facebook, WhatsApp, Twitter‌ ನಲ್ಲಿ ಹಂಚಿಕೊಳ್ಳಿ.

1) patient Name:
2) Age :
3) Gender:
4) Symptoms:
5) SPO2 (oxygen%) :
6) patient in ( home/ hospital/PHC) :
7) Name of hospital /PHC :
8) Ward number / Name (mandatory RAT +ve) :
9) covid test (RTPCR/RAT/Not done) :
10) SRF number/BU number :
11) Covid result :
12) Attendant name :
13) Attendant mobile no :
14) Co- morbidities : BP, sugar, heat conditions :
15) preferred hospital : pvt /govt
16) type of bed General/HDU/ ICU / ventilator :
17) Other remarks :


Step-5 

ಆಸ್ಪತ್ರೆಗೆ ದಾಖಲಾಗುವುದು


*ನಿಮಗೆ bed ದೊರಕಿದಲ್ಲಿ, Oxygen ಉಳ್ಳ Ambulance ನೆರವಿನಿಂದ ಆಸ್ಪತ್ರೆಗೆ ತೆರಳಿ‌.
Ambulance ಸೌಲಭ್ಯ ಪಡೆಯಲು ನೀವು 108 ಸಹಾಯವಾಣಿಗೆ ಅಥವಾ ಸಂಬಂಧಪಟ್ಟ ಆಸ್ಪತ್ರೆಗೆ ಕರೆ ಮಾಡಿ‌.

*ಆಸ್ಪತ್ರೆ ತಲುಪಿದ ಮೇಲೆ ಒಂದು ವೇಳೆ ನಿಮಗೆ bed ಸಿಗದಿದ್ದರೆ, ತಟ್ಟನೆ ಆಸ್ಪತ್ರೆಯ Emergency roomಗೇ‌ ತೆರಳಿ‌ ದಾಖಲಾಗಿ. ಜೊತೆ ಜೊತೆಗೆ bed ವ್ಯವಸ್ಥೆ ಮಾಡುವ ಪ್ರಯತ್ನ ಮಾಡಿ.

ವ್ಯವಸ್ಥೆಯ ವೈಫಲ್ಯದಿಂದ, ಹಲವಾರು ರೋಗಿಗಳು ಆಸ್ಪತ್ರೆಯ bed ಪಡೆಯಲು ಒದ್ದಾಡುತ್ತಿದ್ದಾರೆ‌. ಈ ಕ್ರಮವನ್ನು ಅನುಸರಿಸಿದಲ್ಲಿ ಒಬ್ಬರ ಪ್ರಾಣ ಉಳಿಯಬಹುದು‌. 

ಕಠಿಣ ಪರಿಸ್ಥಿತಿಯಲ್ಲಿ ಧೃತಿಗೆಡದೆ ನಿಮ್ಮ ಆರಾಧ್ಯದೈವನಲ್ಲಿ ನಂಬಿಕೆಯಿಡಿ.

ಧೈರ್ಯವಾಗಿರಿ ಹಾಗೂ ಸುರಕ್ಷಿತವಾಗಿರಿ

  • Jun 15, 2021
  • Category: News
  • Comments: 0
Leave a comment